ಪ್ರಧಾನಿ ಮೋದಿ ಡೆಂಘೀ ಸೊಳ್ಳೆಯಿದ್ದಂತೆ. ಅವರಿಂದ ಎಲ್ಲರೂ ಕಾಯಿಲೆ ಬೀಳುತ್ತಿದ್ದಾರೆ: ಕಾಂಗ್ರೆಸ್ ಶಾಸಕಿ

ಕರಾವಳಿ ಕರ್ನಾಟಕ ವರದಿ

ಮುಂಬೈ
: ಪ್ರಧಾನಮಂತ್ರಿ ನರೇಂದ್ರ ಮೋದಿ ಡೆಂಘೀ ಸೊಳ್ಳೆಯಿದ್ದಂತೆ, ಅವರಿಂದ ಎಲ್ಲರೂ ಕಾಯಿಲೆಗೆ ಬೀಳುತ್ತಿದ್ದಾರೆಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಿ ಪ್ರಣೀತಿ ಶಿಂಧೆ ಶನಿವಾರ ಹೇಳಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದಲ್ಲಿ ಮಾತನಾಡಿರುವ ಮಹಾರಾಷ್ಟ್ರ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಪುತ್ರಿ ಹಾಗೂ ಮಹಾರಾಷ್ಟ್ರದ ಸೊಲ್ಲಾಪು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಪ್ರಣೀತಿ ಶಿಂಧೆಯವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಡೆಂಘೀ ಸೊಳ್ಳೆಗೆ ಹೋಲಿಕೆ ಮಾಡಿದ್ದಾರೆ.

ನಮ್ಮ ದೇಶದಲ್ಲಿ ಹೊಸ ಡೆಂಘೀ ಸೊಳ್ಳೆಯೊಂದು ಕಾಣಿಸಿಕೊಂಡಿದೆ. ಅದರ ಹೆಸರು ಮೋದಿ ಬಾಬಾ. ಈ ಸೊಳ್ಳೆಯಿಂದ ಎಲ್ಲರೂ ಕಾಯಿಲೆಗೆ ಬೀಳುತ್ತಿದ್ದಾರೆ. ಹೀಗಾಗಿ ಕೀಟ ನಾಶಕ ಸಿಂಪಡಿಸಿ ಅದು ಅಧಿಕಾರಕ್ಕೆ ಬರದಂತೆ ತಡೆಯಿರಿ ಎಂದು ತಿಳಿಸಿದ್ದಾರೆ.

ಶಿಂಧೆಯವರ ಈ ಹೇಳಿಕೆಗೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರೇವ್ ಪಾರ್ಟಿ, ಸ್ಲೀವ್ ಲೆಸ್ ಬಟ್ಟೆ ಹಾಕುವವರಿಂದ ನಾವು ಈ ಮಾತು ಕೇಳಬೇಕಿಲ್ಲ ಎಂದಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ