ವಿರಾಟ್ ಕೊಹ್ಲಿಯಿಂದ 10 ಸಾವಿರ ರನ್. ಒಂದೇ ಪಂದ್ಯದಲ್ಲಿ ಹಲವು ದಾಖಲೆ ಸೃಷ್ಟಿ!

ಕರಾವಳಿ ಕರ್ನಾಟಕ ವರದಿ

ವಿಶಾಖಪಟ್ಟಣ:
ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಶತಕ ಸಿಡಿಸಿ 10 ಸಾವಿರ ರನ್ ಪೂರೈಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಏಕದಿನ ಕ್ರಿಕೆಟ್ ವೃತ್ತಿ ಜೀವನದ 37ನೇ ಶತಕ ಸಡಿಸಿದ ವಿರಾಟ್ ಕೊಹ್ಲಿ, ತಮ್ಮ ಒಟ್ಟಾರೆ ಶತಕಗಳ ಸಂಖ್ಯೆಯನ್ನು (ಟೆಸ್ಟ್ ಮಾದರಿಯೂ ಸೇರಿದಂತೆ) 61ಕ್ಕೆ ಏರಿಸಿಕೊಂಡರು. 2 ವರ್ಷದ ವಿಾಟ್ ಕೊಹ್ಲಿ 10 ಸಾವಿರ ರನ್ ಪೂರೈಸುವ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ ಎರಡನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಈ ಹಿಂದೆ ಭಾರತ ತಂಡದ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ 27ನೇ ವಯಸ್ಸಿನಲ್ಲಿ 10 ಸಾವಿರ ರನ್ ಪೂರೈಸಿದರು. ಇನ್ನು ಕೊಹ್ಲಿ ಅತ್ಯಂತ ವೇಗವಾಗಿ 10 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಕೊಹ್ಲಿ ಈ ಸಾಧನೆಗಾಗಿ ಕೇವಲ 20 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದಾರೆ.

ಇನ್ನು ಭಾರತದ 47ನೇ ಓವರ್ ನಲ್ಲಿ ಕೊಹ್ಲಿ ಹಾಲಿ ಕ್ರಿಕೆಟ್ ವರ್ಷದ ಕ್ಯಾಲೆಂಡರ್ ನಲ್ಲಿ 1 ಸಾವಿರ ರನ್ ಪೂರೈಸಿದ ದಾಖಲೆ ಬರೆದರು. 2018ರಲ್ಲಿ ಕೊಹ್ಲಿ 11 ಪಂದ್ಯಗಳಿಂದ ಭರ್ಜರಿ ಬ್ಯಾಟಿಂಗ್ ಸರಾಸರಿ 143.43ರೊಂದಿಗೆ 1 ಸಾವಿರ ರನ್ ಪೂರೈಸಿದ್ದಾರೆ.  ಆ ಮೂಲಕ 2012ರಲ್ಲಿ 15 ಇನ್ನಿಂಗ್ಸ್ ಗಳಲ್ಲಿ  ಸಾವಿರ ರನ್ ಪೂರೈಸಿದ್ದ ತಮ್ಮದೇ ದಾಖಲೆಯನ್ನು ಕೊಹ್ಲಿ ಉತ್ತಮ ಪಡಿಸಿಕೊಂಡರು.

ಅಂತೆಯೇ ವಿಂಡೀಸ್ ವಿರುದ್ಧ ಅಜೇಯ 157 ರನ್ ಸಿಡಿಸಿದ ಕೊಹ್ಲಿ, ಏಕದಿನದಲ್ಲಿ 4ನೇ 150ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು. ಇದಲ್ಲದೆ ಸ್ವದೇಶದಲ್ಲಿ ಕೊಹ್ಲಿ 4 ಸಾವಿರ ರನ್ ಪೂರೈಸಿದ ದಾಖಲೆ ಬರೆದರು. ಅಲ್ಲದೇ ಸ್ವದೇಶದಲ್ಲಿ ವೇಗವಾಗಿ 4 ಸಾವಿರ ರನ್ ಪೂರೈಸಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾದರು. ಈ ಹಿಂದೆ ಸಚಿನ್ 92 ಇನ್ನಿಂಗ್ಸ್ ಗಳಲ್ಲಿ ಭಾರತದಲ್ಲಿ 4 ಸಾವಿರ ರನ್ ಪೂರೈಸಿದ್ದರೆ, ಕೊಹ್ಲಿ ಕೇವಲ 78 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ರನ್ ಪೂರೈಸಿದ್ದಾರೆ.

ಇದಲ್ಲದೆ ಸಚಿನ್ ಹೆಸರಿನಲ್ಲಿದ್ದ ಸ್ವದೇಶದಲ್ಲಿ ವಿಂಡೀಸ್ ವಿರುದ್ಧ ಗರಿಷ್ಠ ರನ್ ಗಳಿಸಿದ ದಾಖಲೆಯನ್ನೂ ಕೊಹ್ಲಿ ಹಿಂದಿಕ್ಕಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ