ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ‘ಸಾಹೋ’ದ ರೋಚಕ ದೃಶ್ಯಗಳ ರಸದೌತಣ ಬಡಿಸಿದ ಪ್ರಭಾಸ್‍
ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ‘ಸಾಹೋ’ದ ರೋಚಕ ದೃಶ್ಯಗಳ ರಸದೌತಣ ಬಡಿಸಿದ ಪ್ರಭಾಸ್‍

ಕರಾವಳಿ ಕರ್ನಾಟಕ ವರದಿ

ನಮ್ಮ ಪರದೆಯ ಮೇಲಿನ ‘ಬಾಹುಬಲಿ’ಯ ಹುಟ್ಟುಹಬ್ಬವೂ ಆಗಿರುವ ಅಕ್ಟೋಬರ್‍ 23 ರಂದು ಮುಂಜಾನೆ ಫೇಸ್‍ಬುಕ್‍ನಲ್ಲಿ ಪ್ರತ್ಯಕ್ಷರಾದ ಸೂಪರ್‍ಸ್ಟಾರ್‍ ಪ್ರಭಾಸ್‍, ತಮ್ಮ ಮುಂಬರುವ ದೊಡ್ಡ ನಿರೀಕ್ಷೆಯ ಚಿತ್ರ ‘ಸಾಹೋ’ದ ವಿಶೇಷ ವೀಡಿಯೋದ ತುಣುಕೊಂದನ್ನು ಸದ್ದಿಲ್ಲದೆ ಬಿಡುಗಡೆ ಮಾಡಿದ್ದಾರೆ.

ವೀಡಿಯೋ ನಮ್ಮ ಭಾರತದ ಸೂಪರ್‍ಸ್ಟಾರ್‍ ಪ್ರಭಾಸ್‍ರ ಹೊಚ್ಚ ಹೊಸ, ಸಿನಿಮಾದ ಉಬರ್‍-ಸ್ಟೈಲ್‍ ನೋಟವನ್ನು ತೆರೆದಿಡುವುದಲ್ಲದೆ, ಅಬುದಾಬಿ ವೇಳಾಪಟ್ಟಿಯ ಚಿಕ್ಕ ಮುನ್ನೋಟವನ್ನೂ ನೀಡುತ್ತದೆ. ಇಲ್ಲಿ ‘ಸಾಹೋ’ ಚಿತ್ರತಂಡ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಎನ್ನಬಹುದಾದ, ಬಹುಕೋಟಿ ವೆಚ್ಚದ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸಿತ್ತು. 

ವೀಡಿಯೋ ಬಿಡುಗಡೆಯಾಗುತ್ತಿದ್ದಂತೆ, ಭಾರತದಾದ್ಯಂತ ಇರುವ ಮತ್ತು ಸಾಗರದಾಚೆಯ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಸೂಪರ್‍ಸ್ಟಾರ್‍ರಿಂದ ಹೆಚ್ಚಿನದೇನನ್ನೋ ಕಾಯುತ್ತಿದ್ದರು ಎಂಬಂತೆ ಅಕ್ಷರಶಃ ಹುಚ್ಚಿಗೆದ್ದುಬಿಟ್ಟರು. ಪ್ರಭಾಸ್‍ರ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದಂದು ಮುಂದಿನ ಚಿತ್ರದ ಕುರಿತು ಏನಾದರೂ ಸ್ವಲ್ಪ ವಿಷಯ ಪಡೆಯುವುದು ಒಂದು ಸಂಪ್ರದಾಯವೇ ಆಗಿಬಿಟ್ಟಿದೆ. ಮೊದಲು ಅಲ್ಲಿ ಅಪಾರ ನಿರೀಕ್ಷೆಯಿತ್ತು ಮತ್ತು ವಿಡಿಯೋ ಬಿಡುಗಡೆಯ ನಂತರ ಅದರೊಂದಿಗೆ ಅವರು ಪಟ್ಟಣಕ್ಕೆ ಹೋದರು.

‘ಸಾಹೋ’, ದಾಖಲೆಗಳನ್ನು ಮುರಿದು ಇತಿಹಾಸ ನಿರ್ಮಿಸಿದ ‘ಬಾಹುಬಲಿ’ಯ ನಂತರದ ಪ್ರಭಾಸ್‍ರ ಒಂದು ದೊಡ್ಡ ಬಜೆಟ್‍ನ ಚಿತ್ರವಾಗಿದ್ದು, ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಅಂದರೆ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ‘ಬಾಹುಬಲಿ’ ಜಾಗತಿಕವಾಗಿ ಭಾರೀ ಪ್ರಮಾಣದಲ್ಲಿ ಅಂದರೆ ರೂ. 1500 ಕೋಟಿ ಆದಾಯ ಗಳಿಸಿತ್ತು.   

ತುಂಬಾ ಹಿಂದೆಯೇ ಬಿಡುಗಡೆಯಾಗಿದ್ದ ‘ಸಾಹೋ’ದ ಟೀಸರ್‍ ದೊಡ್ಡ ಮಟ್ಟದಲ್ಲಿ ಹಿಟ್‍ ಎನಿಸಿಕೊಂಡಿತ್ತು ಮತ್ತು ಆಗಿನಿಂದಲೂ ಪ್ರಭಾಸ್‍ರ ಅಭಿಮಾನಿಗಳು ಚಿತ್ರದ ಹೆಚ್ಚೆಚ್ಚು ವಿಷಯಗಳಿಗೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ.

ಅಪಾರ ಬೇಡಿಕೆಗೆ ಮಣಿದು, ಮೊಟ್ಟ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಎಂಬಂತೆ ಚಿತ್ರದ ನಿರ್ಮಾಪಕರು ಸಂಕ್ಷಿಪ್ತ ವೀಡಿಯೋ ತುಣುಕುಗಳನ್ನು ‘ಶೇಡ್ಸ್‍ ಆಫ್‍ ಸಾಹೋ’ ಎಂಬ ಹೆಸರಲ್ಲಿ ಬಿಡುಗಡೆ ಮಾಡಿದರು. ಇದು ಈ ದೊಡ್ಡ ಬಜೆಟ್‍ ಚಿತ್ರದ ನಿರ್ಮಾಣ ಮತ್ತು ಚಿತ್ರದ ದೃಶ್ಯಗಳ ಅಪರೂಪದ ಸಮ್ಮಿಶ್ರಣ, ಮತ್ತದು ಪ್ರಭಾಸ್‍ರ ಲಕ್ಷಾಂತರ ಅಭಿಮಾನಿಗಳಿಗೆ ಚಿತ್ರದ ಪೂರ್ವಾನುಭವ ನೀಡಲಿದೆ.   

ಭಾರತದ ಸೂಪರ್‍ಸ್ಟಾರ್‍ ಪ್ರಭಾಸ್‍ ಮತ್ತು ಬಾಲಿವುಡ್‍ ನಟಿ ಶ್ರದ್ಧಾ ಕಪೂರ್‍ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಸಾಹೋ’, ಜಾಕಿ ‍ಶ್ರಾಫ್‍, ನೀಲ್‍ ನಿತಿನ್‍ ಮುಖೇಶ್‍, ಮಂದಿರಾ ಬೇಡಿ, ಚಂಕಿ ಪಾಂಡೆ, ಮಹೇಶ್‍ ಮಾಂಜ್ರೇಕರ್‍, ಅರುಣ್‍ ವಿಜಯ್‍, ಮುರಳಿ ಶರ್ಮ ಮೊದಲಾದವರ ಸಮಗ್ರ ಪಾತ್ರವರ್ಗವನ್ನು ಹೊಂದಿರಲಿದೆ.

ಪ್ರಭಾಸ್‍ರ ಮುಂದಿನ ದೊಡ್ಡ ಚಿತ್ರ ‘ಸಾಹೋ’ ಒಂದು ಹೈಆಕ್ಟೇನ್‍ ಆ್ಯಕ್ಷನ್‍ ಥ್ರಿಲ್ಲರ್‍, ತ್ರಿಭಾಷಾ ಚಿತ್ರ, ಮತ್ತು ಅದರ ಚಿತ್ರೀಕರಣ ಇನ್ನೂ ಪ್ರಗತಿಯಲ್ಲಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್‍ ಅಡಿಯಲ್ಲಿ ವಾಮ್ಸಿ, ಪ್ರಮೋದ್‍, ವಿಕ್ರಮ್‍ ಚಿತ್ರವನ್ನು ನಿರ್ಮಿಸುತ್ತಿದ್ದು ಸುಜೀತ್‍ ನಿರ್ದೇಶಿಸುತ್ತಿದ್ದಾರೆ.

ಈ ಚಲನಚಿತ್ರವನ್ನು ದೇಶದ ಒಳಗಿನ, ಸುತ್ತಲಿನ ಮತ್ತು ಹೊರಗಿನ ಅದ್ಭುತ ತಾಣಗಳಲ್ಲಿ ಚಿತ್ರಿಸಲಾಗುತ್ತಿದೆ. ಶಂಕರ್‍-ಎಹ್ಸಾನ್‍-ಲೋಯ್‍ ಮೂವರ ಅದ್ಭುತ ಜೋಡಿ ಸಂಗೀತ ಒದಗಿಸಿದ್ದಾರೆ ಮತ್ತು ಪ್ರತಿಭಾವಂತ ಅಮಿತಾಬ್‍ ಭಟ್ಟಾಚಾರ್ಯ ಅವರ ಸಾಹಿತ್ಯ ನಮ್ಮ ಪ್ಲೇ ಲಿಸ್ಟ್‍ಗಳಿಗೆ ಹೊಸ ಹುರುಪು ನೀಡುವುದು ಖಚಿತ.   

ಛಾಯಾಗ್ರಹಣ ನಿರ್ದೇಶಕ ಮಾಧೀ, ಬಹುಮುಖ ಸಂಪಾದಕ ಶ್ರೀಕರ ಪ್ರಸಾದ್‍ ಮತ್ತು ಜನಪ್ರಿಯ ನಿರ್ಮಾಣ ವಿನ್ಯಾಸಗಾರ ಸಾಬು ಸಿರಿಲ್‍ ಚಿತ್ರದಲ್ಲಿ ಅದ್ಭುತ ಕಾರ್ಯಕ್ಷಮತೆ ತೋರಿಸುವುದನ್ನು ನೀವು ನಿರೀಕ್ಷಿಸಬಹುದು

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ