ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಯುವಕನ ಮೇಲೆ ಬಸ್ ಹರಿದು ಸಾವು
ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಯುವಕನ ಮೇಲೆ ಬಸ್ ಹರಿದು ಸಾವು

ಕರಾವಳಿ ಕರ್ನಾಟಕ ವರದಿ

ಮೂಡಬಿದಿರೆ:
ಬೈಕ್ ಸ್ಕಿಡ್ ಆಗಿ ಯುವಕನೋರ್ವ ರಸ್ತೆಗೆ ಬಿದ್ದು ಆತನ ಮೇಲೆ ಬಸ್ ಹರಿದು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.

ಮೃತರನ್ನು ಮೂಡಬಿದಿರೆಯ ಕಾಲೇಜು ವಿದ್ಯಾರ್ಥಿ ಮೋಹಿತ್ (19) ಎಂದು ಗುರುತಿಸಲಾಗಿದೆ. ಇವರು ಮಿಜಾರು ದಡ್ಡಿ ನಿವಾಸಿ ಸೀತಾರಾಮ ಗೌಡ ಎಂಬವರ ಪುತ್ರರಾಗಿದ್ದಾರೆ.

ಬುಧವಾರ ಸಂಜೆ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಮೋಹಿತ್ ಕೆಳಗೆ ಬಿದ್ದಿದ್ದಾರೆ. ರಸ್ತೆಗೆ ಬಿದ್ದ ಮೋಹಿತ್ ಮೇಲೆ ಮೂಡಬಿದಿರೆಯತ್ತ ಬರುತ್ತಿದ್ದ ಬಸ್ ಒಂದು ಹರಿದು ಹೋಗಿದೆ. ಮೋಹಿತ್ ಸ್ಥಳದಲ್ಲಿಯೆ ಸಾವನ್ನಪ್ಪಿದ್ದು ಅವರ ಸ್ನೇಹಿತ ಗಾಯಗಳಿಲ್ಲದೆ ಪಾರಾಗಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ