ಬಾವಿಕಟ್ಟೆಯಲ್ಲಿ ಕೂತು ಮೊಬೈಲ್ ಗೇಮ್: ಯುವಕ ಸಾವು

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಬಾವಿಕಟ್ಟೆಯಲ್ಲಿ ಕೂತು ಮೊಬೈಲ್ ಫೋನ್ ನಲ್ಲಿ ಗೇಮ್ಸ್ ಆಡುವುದರಲ್ಲಿ ತಲ್ಲೀನನಾಗಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದ ಯುವಕನೋರ್ವ ಸಾವಪ್ಪಿದ ಘಟನೆ ವರದಿಯಾಗಿದೆ.

ಬಸ್ರೂರು ಗುಂಡಿಗೋಳಿ ಬೈಲ್ ಮನೆ ಶೀನ ಪೂಜಾರಿಯವರ ಮಗ ಭಾಸ್ಕರ ಪೂಜಾರಿ (21)ಸಾವಪ್ಪಿದ್ದಾರೆ.

ಭಾಸ್ಕರ ಅವರಿಗೆ ಮೊಬೈಲ್ ನಲ್ಲಿ ಗೇಮ್ ಆಡುವುದು ಇಷ್ಟದ ಹವ್ಯಾಸವೆನ್ನಲಾಗಿದ್ದು, ಬಸ್ರೂರು ಹರೀಶ್ ಪೂಜಾರಿಯವರ ವೆಲ್ಡಿಂಗ್ ಅಂಗಡಿ ಬಳಿ ಶುಕ್ರವಾರ ರಾತ್ರಿ ಎಂಟುವರೆ ಬಳಿಕ ಈ ದುರ್ಘಟನೆ ಸಂಭವಿಸಿದೆ.

ಭಾಸ್ಕರ ಪೂಜಾರಿಯವರ ಸಹೋದರ ರಾಘವೇಂದ್ರ ಅವರು ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ