ಹಿಂದುಳಿದ ವರ್ಗದ ಯುವಕರ ಕೈಗೆ ಕತ್ತಿ ಕೊಟ್ಟಿದ್ದೆ ಅನಂತ ಕುಮಾರ ಹೆಗೆಡೆ ಸಾಧನೆ: ಅಸ್ನೋಟಿಕರ್

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ
: ಅನಂತಕುಮಾರ ಹೆಗಡೆ  ಹಿಂದುಳಿದ ವರ್ಗದ ಯುವಕರ ಕೈಗೆ ಕತ್ತಿ ಕೊಟ್ಟಿದ್ದಾರೆ. ಆದರೆ ಈಗ ಅವರು ಹಿಂದುಳಿದ ಯುವಕರ ಮೇಲಿರುವ ಕೇಸ್ ಗಳ ಬಗ್ಗೆ  ಮಾತನಾಡುತ್ತಿಲ್ಲ  ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಸಚಿವ ಅನಂತ ಕುಮಾರ ಹೆಗೆಡೆ ವಿರುದ್ಧ ಹರಿಹಾಯ್ದಿದ್ದಾರೆ.

ಶಿರಸಿಯಲ್ಲಿ ಗುರುವಾರ ನೀಡಿರುವ ಹೇಳಿಕೆಯಂತೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ  ತಾಕತ್ತಿದ್ದರೆ ಐದು ತಿಂಗಳಲ್ಲಿ ಅಂಕೋಲಾದಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಿ ನೋಡೋಣ ಎಂದು ಅಸ್ನೋಟಿಕರ್ ಸವಾಲು ಹಾಕಿದ್ದಾರೆ.

ಕಾರವಾರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಅನಂತಕುಮಾರ ಹೆಗಡೆ ನಾಲಾಯಕ್, ಲೋಫರ್ ಎಂದು ಈ ಹಿಂದೆ ಹೇಳಿಕೆ ನೀಡಿದ್ದೆ. ಅದನ್ನು ಮತ್ತೆ ಸಮರ್ಥಿಸಿಕೊಳ್ಳುತ್ತೇನೆ. ಅವರು ರಾಜಕೀಯಕ್ಕೆ ಬಂದಿದ್ದು ಸೇವೆ ಮಾಡಲು ಅಲ್ಲ ಎನ್ನುವುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.

ರಾಜಕೀಯದ ಬುನಾದಿಯೇ ಸಮಾಜಸೇವೆಯಾಗಿದೆ. ಅನಂತಕುಮಾರ ಸಮಾಜಸೇವೆ ಮಾಡೋಕೆ ಬಂದಿಲ್ಲ ಎನ್ನುತ್ತಾರೆ. ಇನ್ನು ಜಗತ್ತಿಗೆ ಸುದ್ದಿ ಮುಟ್ಟಿಸುವ ಕೆಲಸ ಮಾಡುತ್ತಿರುವ ಮಾಧ್ಯಮದವರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಹಾಗಾದರೆ ಮಾಧ್ಯಮದವರದ್ದು ಏನು ಬೇಕಾದರೂ ಬರಿಯೋ ಕೆಲಸ ಅಂತ ಅಂದುಂಕೊಂಡಿದ್ದಾರಾ? ಅನಂತಕುಮಾರ ಹೆಗಡೆ ಮಾಧ್ಯಮ ರಂಗಕ್ಕೆ ಅಪಚಾರ ಮಾಡುತ್ತಿದ್ದಾರೆ  ಎಂದು ಆರೋಪಿಸಿದರು.

ಅನಂತಕುಮಾರ ಹೆಗಡೆ  ಹಿಂದುಳಿದ ವರ್ಗದ ಯುವಕರ ಕೈಗೆ ಕತ್ತಿ ಕೊಟ್ಟಿದ್ದಾರೆ. ಆದರೆ ಈಗ ಅವರು ಹಿಂದುಳಿದ ಯುವಕರ ಮೇಲಿರುವ ಕೇಸ್ ಗಳ ಬಗ್ಗೆ  ಮಾತನಾಡುತ್ತಿಲ್ಲ. ಅನಂತಕುಮಾರ ಹೆಗಡೆ ರಾಜಕಾರಣ ಪರೇಶ್ ಮೇಸ್ತ ಸಾವಿನ ಮೇಲೆ ನಡೆಯುತ್ತಿದೆ. ಇನ್ನೂ ಆ ಕೊಲೆಯ ತನಿಖೆ ಸಿಬಿಐನಿಂದ ಆಗಿಲ್ಲ. ಈಗ ಲೋಕಸಭಾ ಚುನಾವಣೆಗೂ ಇದನ್ನೇ ಬಳಸಿಕೊಳ್ಳುತ್ತಾರೆ. ಅವರಿಗೆ ಈ ಬಾರಿ ಅವಕಾಶ ಕೊಡಬಾರದು. ಈ ಬಾರಿಯಾದರೂ ಎಲ್ಲರೂ ಒಟ್ಟಾಗಿ ಅನಂತಕುಮಾರ ಹೆಗಡೆಗೆ ಬುದ್ಧಿ ಕಲಿಸಬೇಕು. ಸಮಾಜಸೇವೆ ಮಾಡುವ ವ್ಯಕ್ತಿ ನಮಗೆ ಬೇಕು ಎಂದರು.

ಸಂಸದರ ಅ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಮಿಟಿ ಇದೆ. ಐದು ವರ್ಷಗಳಲ್ಲಿ ಅವರು ಎಷ್ಟು ಸಭೆ ನಡೆಸಿದ್ದಾರೆ? ಎಷ್ಟು ಸಮೀಕ್ಷೆ ಮಾಡಿದ್ದಾರೆ? ಅನಂತಕುಮಾರ ಹೆಗಡೆಯನ್ನ ರಾಜಕೀಯದಿಂದಲೇ ಹೊರ ಹಾಕಬೇಕು. ಈ ಸಾರಿ ಬದಲಾವಣೆ ತರಬೇಕಾಗಿದೆ ಎಂದು ಗುಡುಗಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ