ಶಿಕ್ಷಣ ಸಚಿವ ಎನ್ ಮಹೇಶ್ ರಾಜೀನಾಮೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಆಘಾತ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ರಾಜ್ಯ ಶಿಕ್ಷಣ ಸಚಿವ ಎನ್​. ಮಹೇಶ್​ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಸರ್ಕಾರಕ್ಕೆ ಬಿಎಸ್‌ಪಿ ನಾಯಕ ಆಘಾತ ನೀಡಿದ್ದಾರೆ.

ಜೆಡಿಎಸ್​ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಜಯಗಳಿಸಿದ ಬಹುಜನ ಸಮಾಜವಾದಿ ಪಕ್ಷದ  ಶಾಸಕ ಎನ್​. ಮಹೇಶ್ ರಾಜೀನಾಮೆ ವದಂತಿ ಕೆಲ ದಿನಗಳಿಂದ ಚಾಲ್ತಿಯಲ್ಲಿತ್ತು. ಇದೀಗ ಮಹೇಶ್ ಧಿಡೀರ್ ರಾಜೀನಾಮೆ ಕೊಟ್ಟಿದ್ದಾರೆ.

ಮಹಾಮೈತ್ರಿ ಮಾಡಿಕೊಳ್ಳುತ್ತೇವೆ ಎಂದ ಕಾಂಗ್ರೆಸ್-ಬಿಎಸ್‌ಪಿ ನಡುವೆ ಇತ್ತೀಚಿನ ದಿನಗಳಲ್ಲಿ  ಭಿನ್ನಮತ ಆರಂಭವಾಗಿತ್ತು. ಈ ಬಗ್ಗೆ ಮಾಯಾವತಿ ಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದರು. 

ರಾಜೀನಾಮೆ ನೀಡಿದ ನಂತರ ಮಾತನಾಡಿದ ಎನ್​ ಮಹೇಶ್​, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಶಾಸಕನಾಗಿ ಮುಂದುವರಿಯಲಿದ್ದು ಸರ್ಕಾರಕ್ಕೆ ಬೆಂಬಲ ಜಾರಿಯಲ್ಲಿರುತ್ತದೆ ಎಂದು ಮಹೇಶ್ ತಿಳಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ