ರಾಜಕೀಯಕ್ಕೆ ಬಂದಿದ್ದು ಸಮಾಜಸೇವೆಗಲ್ಲ: ಸಚಿವ ಅನಂತಕುಮಾರ ಹೆಗಡೆ!

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಶಿರಸಿ:
ನಾವು ಕುರ್ಚಿಯ ಮೇಲೆ ಬಂದು ಕುಳಿತಿದ್ದು ರಾಜಕಾರಣ ಮಾಡೋದಕ್ಕೆ ಹೊರತು ಸಮಾಜ ಸೇವೆ ಮಾಡೋದಕ್ಕಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಿರಸಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ರಾಜಕೀಯದಲ್ಲಿದ್ದವರಿಗೆ ರಾಜಕಾರಣವೆನ್ನುವುದು ವೃತ್ತಿಯಾಗಿರುತ್ತದೆಯೇ ಹೊರತು ಸೇವೆಯಲ್ಲ. ಅದಕ್ಕಾಗಿಯೇ ಎಂಎಲ್‌ಎ, ಎಂಪಿಗಳಾಗಿರುವುದು.ನಮಗೆ  ರಾಜಕಾರಣ ಬಿಟ್ಟು ಬೇರೇನೂ ಮಾಡೋದಕ್ಕೆ ಬರುವುದಿಲ್ಲ, ನಾವು ರಾಜಕಾರಣವನ್ನೇ ಮಾಡೋದು ಎಂದಿದ್ದಾರೆ.

ಅಲ್ಲದೆ ನನ್ನ ಈ ಹೇಳಿಕೆಯನ್ನು ಮಾಧ್ಯಮದವರು ಹೇಗೆ ಬೇಕಾದರೂ ಬರೆಯಲಿ. ಅದು ಅವರವರ ಭಾವಕ್ಕೆ, ಅವರವರ ಭಕುತಿಗೆ ಎಂದು ಕೂಡ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ