ರಫೇಲ್ ಡೀಲ್‌ನಲ್ಲಿ ಪ್ರಧಾನಿ ಮೋದಿ ಭ್ರಷ್ಟಾಚಾರ ಮಾಡಿದ್ದಾರೆ. ತನಿಖೆ ನಡೆಸಬೇಕು: ರಾಹುಲ್ ಆಗ್ರಹ

ನವದೆಹಲಿ: ಅನಿಲ್ ಅಂಬಾನಿ ಕಿಸೆ ತುಂಬಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ರಫೇಲ್ ಯುದ್ಧ ವಿಮಾನದ ಒಪ್ಪಂದದಲ್ಲಿ ಸ್ವತಃ ಭ್ರಷ್ಟಾಚಾರ ಎಸಗಿದ್ದಾರೆ, ಈ ಕುರಿತು ತನಿಖೆ ನಡೆಯಬೇಕೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ 'ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಳ್ಳುವುದನ್ನು ನರೆಂದ್ರ ಮೋದಿ ಕಡ್ಡಾಯಗೊಳಿಸಿದ ಕಾರಣ ತಾನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು ಎಂದು ಡಸಾಲ್ಟ್ ಕಂಪೆನಿಯ ಉಪಾಧ್ಯಕ್ಷರು ಹೇಳಿದ್ದಾರೆ. ಈ ಕುರಿತು ಫ್ರಾನ್ಸ್‌ನ ಮಾಧ್ಯಮವೊಂದು ತನಿಖಾ ವರದಿಯನ್ನೂ ಪ್ರಕಟಿಸಿದೆ. ಪ್ರಧಾನಿ ಮೋದಿ ಸ್ವತಃ ಭ್ರಷ್ಟರು ಎನ್ನಲು ಈ ಹಗರಣವೆ ಸಾಕ್ಷಿ' ಎಂದು ಹೇಳಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಈಗ ಫ್ರಾನ್ಸ್‌ಗೆ ಗಡಿಬಿಡಿಯಲ್ಲಿ ಹೊರಟಿರುವುದು ಈ ಹಗರಣವನ್ನು ಮುಚ್ಚಿ ಹಾಕಲಿಕ್ಕೆ ಎಂದು ಸಹ ರಾಹುಲ್ ಆರೋಪಿಸಿದ್ದಾರೆ.

ರಫೇಲ್ ಯುದ್ಧ ವಿಮಾನಗಳ ಒಪ್ಪಂದದ ಕುರಿತಂತೆ ಎನ್‍ಡಿಎ ಸರ್ಕಾರ ದೊಡ್ಡ ಹಗರಣದಲ್ಲಿ ಭಾಗಿಯಾಗಿದೆ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆರೋಪ ಮಾಡುತ್ತಿರುವಾಗಲೆ ಅತ್ತ ಫ್ರಾನ್ಸ್‌ನ ಮೀಡಿಯಾವಾಚ್ ಎಂಬ ಸ್ಂಸ್ಥೆ ಈ ಹಗರಣದ ಕುರಿತು ಸ್ಫೋತಕ ಮಾಹಿತಿಗಳನ್ನು ಹೊರಹಾಕುತ್ತಿದೆ. ಇದು ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಭಾರಿ ಇಕ್ಕಟ್ಟಿಗೆ ಸಿಲುಕಿಸಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ