ವಿದ್ಯುತ್ ಆಘಾತ: ಪುತ್ತೂರು ಎಸ್ಡಿಪಿಐ ಮುಖಂಡ ಸ್ಥಳದಲ್ಲೇ ಸಾವು

ಕರಾವಳಿ ಕರ್ನಾಟಕ ವರದಿ

ಪುತ್ತೂರು
: ವಿದ್ಯುತ್ ಆಘಾತದಿಂದ ಎಸ್ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಹಂಝ ಅಪ್ನಾನ್ ಎಂಬವರು ಸ್ಥಳದಲ್ಲೇ ಮೃತಪಟ್ಟ ಕಳವಳಕಾರಿ ಘಟನೆ ತಡರಾತ್ರಿ ಒಂದು ಗಂಟೆ ಸುಮಾರಿಗೆ ನಡೆದಿದೆ.

ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿ ಫ್ಲೆಕ್ಸ್ ಅಳವಡಿಸುತ್ತಿದ್ದ ಸಂದರ್ಭ, ಫ್ಲೆಕ್ಸ್ ಸರಿಪಡಿಸಲು ಯತ್ನಿಸಿದಾಗ ಪಕ್ಕದಲ್ಲಿದ್ದ ವಿದ್ಯುತ್ ತಂತಿ ತಾಗಿ ಹಂಝ ಅವರು ಸಾವಪ್ಪಿದರು.

ಪುತ್ತೂರು ನಗರದ ದರ್ಬೆ ಬಳಿ ಘಟನೆ ಸಂಭವಿಸಿದ್ದು, ಕೂರ್ನಡ್ಕ ನಿವಾಸಿ ಹಂಝ  ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಕುಟುಂಬದೊಂದಿಗೆ ಹಿಂತಿರುಗುತ್ತಿದ್ದ ಹಂಝ ಅವರು ಕಾರಿನಿಂದ ಇಳಿದು ಫ್ಲೆಕ್ಸ್ ಸರಿಪಡಿಸಲು ಯತ್ನಿಸಿದಾಗ ಊಹಿಸಲಾಗದ ಘಟನೆ ನಡೆದಿತ್ತು.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ