ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿಕಾರವಾರ: ಕಾರು ಹಾಗೂ ಕಂಟೇನರ್ ನಡುವೆ ಭೀಕರ ಅಪಘಾತದಲ್ಲಿ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು ಓರ್ವರು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹಾಗೂ ಅಂಕೋಲಾ ತಾಲೂಕುಗಳ ಗಡಿಭಾಗ ಮಾದನಗೇರಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಜೆ ನಡೆದಿದೆ.
ಕಾರಿನಲ್ಲಿದ್ದ ಮಹಾರಾಷ್ಟ್ರ ಮೂಲದ ಸುರೇಶ ರಾಯ್ಕರ(65) ಹಾಗೂ ಚಂದ್ರಕಲಾ ರಾಯ್ಕರ(60) ಮೃತ ಪಟ್ಟವರು. ಭಾರತೀ ವೆರ್ಣೇಕರ(46) ಅವರಿಗೆ ಗಂಭೀರ ಗಾಯವಾಗಿದ್ದು ಕುಮಟಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಂಕೋಲಾದಿಂದ ಕುಮಟಾದತ್ತ ಸಾಗುತ್ತಿದ್ದ ವೇಳೆ ಕಾರಿನ ಎದುರು ಇದ್ದ ಲಾರಿಯೊಂದು ಏಕಾ ಏಕಿ ಬ್ರೇಕ್ ಹೊಡೆದಿದೆ. ಹೀಗಾಗಿ ಕಾರು ಚಾಲಕ ಕೂಡಾ ಬ್ರೇಕ್ ಹಾಕಿದಾಗ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕಂಟೇನರ್ ಕಾರಿನ ಮೇಲೆರಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದಿಂದ ತಮ್ಮ ಸಂಬಂಧಿಯೊಬ್ಬರ ಮನೆಗೆ ಇವರು ಬಂದಿದ್ದರು ಎನ್ನಲಾಗಿದೆ.
5 ಗ್ರಾ.ಪಂ.ಗಳನ್ನು ಸೇರಿಸಿ ಗ್ರೇಟರ್ ಉಡುಪಿ!