ಮಂಗಳೂರು: ಮಹಿಳೆಗೆ ಕಿರುಕುಳ, ಮ್ಯಾನೇಜರ್ ಸೆರೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಮಹಿಳಾ ಉದ್ಯೋಗಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ನಿರ್ಮಾಣ ಸಂಸ್ಥೆಯೊಂದರ ವ್ಯವಸ್ಥಾಪಕನನ್ನು ಬಂಧಿಸಲಾಗಿದೆ.

ಉಪ್ಪಳ ನಿವಾಸಿ ಅಬ್ದುಲ್ ಲತಿಫ್ ಖಾದರ್(37) ಎಂಬವರನ್ನು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಬಂಧಿಸಲಾಗಿದೆ. ಕೋಟೆಕಾರ್ ನಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಗೆ ಲತೀಫ್ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

ಅಕ್ಟೋಬರ್ 8, ಸೋಮವಾರದಂದು ಯುವತಿಯು ಸಂಸ್ಥೆಯ ಕಚೇರಿಯಲ್ಲಿ ಏಕಾಂಗಿಯಾಗಿದ್ದ ಸಮಯ ಸಾಧಿಸಿ ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ವಿಷಯ ಬಹಿರಂಗಪಡಿಸಿದಂತೆ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.

ಉಳ್ಳಾಲ ಪೊಲೀಸರು 341, 354(a), 354 and 506 ಅನ್ವಯ ಪ್ರಕರಣ ದಾಖಲಿಸಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ