ಬಸ್‌ನಡಿಗೆ ಸಿಲುಕಿದ ಬೈಕ್: ಯುವಕರಿಬ್ಬರು ದಾರುಣ ಮೃತ್ಯು

ಕರಾವಳಿ ಕರ್ನಾಟಕ ವರದಿ

ಬಂಟ್ವಾಳ:
ಜಕ್ರಿಬೆಟ್ಟು ಬಳಿ ಭಾನುವಾರ ಬೆಳಿಗ್ಗೆ ಸರ್ಕಾರಿ ಬಸ್‌ನಡಿಗೆ ಬೈಕ್‌ ಬಿದ್ದು ಇಬ್ಬರು ಸವಾವರರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಮಂಗಳೂರು ಕುಡುಪು ನಿವಾಸಿ ಚರಣ್ ( 18) ಮತ್ತು ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ದಂಡೆಗೋಳಿ ನಿವಾಸಿ ಮಹಮದ್ ನೌಶಾದ್ (18) ಎಂದು ತಿಳಿದು ಬಂದಿದೆ.

ಬಿಸಿರೋಡಿನಿಂದ ಕಾರಿಂಜ ದೇವಸ್ಥಾನ ದ ಕಡೆ ತೆರಳುತ್ತಿದ್ದ ವೇಳೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಸರಕಾರಿ ಬಸ್ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬೈಕ್ ಸವಾರರು ಬಸ್‌ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಸ್ಥಳೀಯರು ಹರಸಾಹಸದಿಂದ ಬಸ್‌ನಡಿಯಲ್ಲಿ ಸಿಲುಕಿದ್ದ ಸವಾರರನ್ನು ಹೊರತೆಗೆದು ಅಂಬ್ಯುಲೆನ್ಸ್‌  ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ಗಂಭೀರ ಸ್ವರೂಪದ ಗಾಯಗೊಂಡಿದ್ದ  ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ