10 ವರ್ಷದ ಹಿಂದಿನ ಲೈಂಗಿಕ ಕಿರುಕುಳ ಪ್ರಕರಣ: ನಾನಾ ಪಾಟೇಕರ್ ವಿರುದ್ಧ ದೂರು ದಾಖಲಿಸಿದ ತನುಶ್ರೀ

ಕರಾವಳಿ ಕರ್ನಾಟಕ ವರದಿ

ಮುಂಬೈ:
ಹತ್ತು ವರ್ಷಗಳ ಹಿಂದಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟ ನಾನಾ ಪಾಟೇಕರ್, ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರೆಸಿದ್ದಾರೆ.

2008ರಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಬಾಲಿವುಡ್​ ನಟಿ ತನುಶ್ರೀ ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದರು. ಬಳಿಕ ಈ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿತ್ತು. ದತ್ತಾ ಮಾಡಿರುವ ಆರೋಪವನ್ನು ಹಿರಿಯ ನಟ, ನಿರ್ಮಾಪಕ ನಾನಾ ಪಾಟೇಕರ್ ಅವರು ನಿರಾಕರಿಸಿದ್ದರು.

ನಾನಾ ಪಾಟೇಕರ್ ಅವರ ವಕೀಲರು ಈಗಾಗಲೇ ತನುಶ್ರೀ ದತ್ತಾಗೆ ಲೀಗಲ್ ನೋಟಿಸ್​ ಕಳುಹಿಸಿದ್ದಾರೆ. ಅಕ್ಟೋಬರ್ 08 ರಂದು ಸುದ್ದಿಗೋಷ್ಠಿ ನಡೆಸಿ ಪಾಟೇಕರ್ ಅವರು ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ

ತನುಶ್ರೀ ದತ್ತಾ ಅವರು ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನಾ ಪಾಟೇಕರ್ ಹಾಗೂ ಗಣೇಶ್ ಆಚಾರ್ಯ ವಿರುದ್ಧ ಆರೋಪ ಹೊರಿಸಲಾಗಿದೆ. 

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ