ಎಟಿಎಮ್‌ಗೆ ನುಗ್ಗಿದ ಕಳ್ಳರು. ಕಳ್ಳತನ ವಿಫಲವಾದಾಗ ಕಾಣಿಕೆ ಡಬ್ಬಿ ಹೊತ್ತೊಯ್ದರು
ಎಟಿಎಮ್‌ಗೆ ನುಗ್ಗಿದ ಕಳ್ಳರು. ಕಳ್ಳತನ ವಿಫಲವಾದಾಗ ಕಾಣಿಕೆ ಡಬ್ಬಿ ಹೊತ್ತೊಯ್ದರು

ಶಿಬಿ ಧರ್ಮಸ್ಥಳ/ಕರಾವಳಿ ಕರ್ನಾಟಕ ವರದಿ

ಬೆಳ್ತಂಗಡಿ
: ಕಕ್ಕಿಂಜೆ ಪೇಟೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನ .ಟಿ.ಎಂಗೆ ನುಗ್ಗಿದ ಕಳ್ಳರು ಎಟಿಎಂ ಒಡೆಯಲು ವಿಫಲ ಯತ್ನ ನಡೆಸಿ ಬಳಿಕ ಪಕ್ಕದ ಅಂಗಡಿಗಳಿಗೆ ನುಗ್ಗಿ ಕಳ್ಳತನ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

 ರಾತ್ರಿಯ ವೇಳೆ ಎಟಿಎಂ ಒಳ ನುಗ್ಗಿದ ಕಳ್ಳರು, ಅದನ್ನು ಒಡೆಯಲು ಯತ್ನಿಸಿದ್ದಾರೆ, ಕಲ್ಲು ಹಾಗೂ ಇತರ ವಸ್ತುಗಳಿಂದ ನಡೆಸಿದ ಪ್ರಯತ್ನ ವಿಫಲವಾಗಿದ್ದು ಕೇವಲ ಗ್ಲಾಸ್ಗಳು ಒಡೆದು ಹೋಗಿದೆ. ಇಲ್ಲಿ ಕಳ್ಳತನ ಸಾಧ್ಯವಾಗದಿದ್ದಾಗ ಸಮೀಪದ ಕೋಳಿ ಅಂಗಡಿಗೆ ತರಕಾರಿ ಅಂಗಡಿಗೂ ಕಳ್ಳರು ನುಗ್ಗಿದ್ದಾರೆ, ಅಲ್ಲಿದ್ದ ಕಾಣಿಕೆ ಡಬ್ಬಿಗಳನ್ನು ಅಪಹರಿಸಿದ್ದಾರೆ.

ಬೆಳಿಗ್ಗೆ ಎಟಿಎಂ ನಲ್ಲಿ ನಡೆದಿರುವ ಕಳ್ಳತನವನ್ನು ಗಮನಿಸಿದ ಸ್ಥಳೀಯರು ಧರ್ಮಸ್ಥಳ ಪೋಲೀಸರಿಗೆ ದೂರು ನೀಡಿದ್ದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್, ಧರ್ಮಸ್ಥಳ ಠಾಣಾಧಿಕಾರಿ ಅವಿನಾಶ್ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿದ್ದಾರೆಎ. ಘಟನಾಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ, ಪರಿಶೀಲನೆಯ ವೇಳೆ ಕಳ್ಳರ ಬಗ್ಗೆ ಕೆಲವೊಂದು ಮಹತ್ವದ ಮಾಹಿತಿಗಳು ಪೋಲೀಸರಿಗೆ ಲಭ್ಯವಾಗಿದ್ದು ಆರೋಪಿಗಳ ಬಗ್ಗೆ ಸುಳಿವುಗಳು ಲಭಿಸಿರುವುದಾಗಿ ತಿಳಿದುಬಂದಿದೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ