ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಕಾದಿದೆ ಆಘಾತ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ: ಎಬಿಪಿ ಸಮೀಕ್ಷೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ
: ಎಬಿಪಿ ನ್ಯೂಸ್ ನಡೆಸಿರುವ ಚುನಾವಣಾ ಸಮೀಕ್ಷೆಯೊಂದು ಭಾರತೀಯ ಜನತಾ ಪಕ್ಷಕ್ಕೆ ಮರ್ಮಾಘಾತ ನೀಡಿದ್ದು ಈ ಸಮೀಕ್ಷೆಯ ಪ್ರಕಾರ ಆಡಳಿತಾರೂಢ ಬಿಜೆಪಿ ಮೂರು ರಾಜ್ಯಗಳಾದ ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಅಧಿಕಾರ ಗದ್ದುಗೆಯಿಂದ ಕೆಳಗಿಳಿಯಲಿದೆ. ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ.

ಎಬಿಪಿ ಸಮೀಕ್ಷೆಯ ಪ್ರಕಾರ, 200 ವಿಧಾನಸಭಾ ಕ್ಷೇತ್ರಗಳಿರುವ ರಾಜಸ್ತಾನದಲ್ಲಿ ಈ ಬಾರಿ ಬಿಜೆಪಿ ಕೇವಲ 56 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಲಿದೆ. 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 163 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಕಳೆದ ಬಾರಿ ಕೇವಲ 21 ಸೀಟು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 142 ಸೀಟುಗಳಲ್ಲಿ ಗೆಲ್ಲಲಿದೆ.

230 ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಮಣಿಸಿ ಅಧಿಉಕಾರಕ್ಕೆ ಏರಲಿದೆ.    ಆಡಳಿತಾರೂಢ ಬಿಜೆಪಿ ಕೇವಲ 108 ಸೀಟುಗಳಲ್ಲಿ ಜಯ ಸಾಧಿಸಲಿದ್ದರೆ, ಕಾಂಗ್ರೆಸ್ 122 ಸೀಟುಗಳನ್ನು ತನ್ನದಾಗಿಸಿಕೊಂಡು ಸ್ಪಷ್ಟ ಬಹುಮತ ಪಡೆಯಲಿದೆ. 2013ರಲ್ಲಿ ಬಿಜೆಪಿ 165ರಲ್ಲಿ ಗೆದ್ದು ಕಾಂಗ್ರೆಸ್ ಕೇವಲ 58 ಕ್ಷೇತ್ರಗಳಿಗೆ ತೃಪ್ತಿಪಟ್ಟಿತ್ತು. ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಛತ್ತೀಸ್‌ಗಢದಲ್ಲಿ ‍90 ಕ್ಷೇತ್ರಗಳಿದ್ದು ರಾಜ್ಯದಲ್ಲಿ ಕಾಂಗ್ರೆಸ್ 47 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ, ಬಿಜೆಪಿ 40 ಮತ್ತು ಇತರ ಪಕ್ಷಗಳು 3 ಸ್ಥಾನಗಳನ್ನು ಪಡೆಯಲಿವೆ. 2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 49, ಕಾಂಗ್ರೆಸ್ 39ರಲ್ಲಿ ಜಯ ದಾಖಲಿಸಿತ್ತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ