ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ: ಕರ್ನಾಟಕದಲ್ಲೂ ತೆರವಾದ ಕ್ಷೇತ್ರಗಳಿಗೆ ಚುನಾವಣೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಐದು ರಾಜ್ಯಗಳು ಸೇರಿ ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಇಂದಿನಿಂದಲೇ ನೀತಿ ಸಂಹಿತೆ  ಜಾರಿಯಾಗಿದೆ. ಡಿಸೆಂಬರ್​ ಅಂತ್ಯದೊಳಗೆ ಎಲ್ಲಾ ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮುಗಿಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಓಂ ಪ್ರಕಾಶ್​ ರಾವತ್​  ಕರ್ನಾಟಕದ ರಾಮನಗರ ಹಾಗೂ ಜಮಖಂಡಿ ಕ್ಷೇತ್ರಗಳ ಉಪಚುನಾವಣೆಗೂ ದಿನಾಂಕವನ್ನು ಪ್ರಕಟಿಸಿದ್ದಾರೆ. ಕರ್ನಾಟಕದಲ್ಲಿ ತೆರವಾಗಿರುವ ಮೂರು ಲೋಕಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ

ಐದು ರಾಜ್ಯಗಳಾದ ಮಧ್ಯಪ್ರದೇಶ, ಛತ್ತಿಸ್​ಘಡ, ರಾಜಸ್ಥಾನ್, ಮಿಜೋರಾಂ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆ ನಡೆಯಲಿದ್ದು ಡಿಸೆಂಬರ್​ 11ರಂದು ಎಲ್ಲಾ ಚುನಾವಣೆಗಳ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಗುವುದು ಎಂದು ಓಂ ಪ್ರಕಾಶ್​ ರಾವತ್​ ತಿಳಿಸಿದರು.

ಚುನಾವಣಾ ವೇಳಾಪಟ್ಟಿ ಈ ಕೆಳಗಿನಂತಿದೆ
ರಾಜಸ್ಥಾನ
:
ನಾಮಪತ್ರ ಸಲ್ಲಿಕೆ: ನವೆಂಬರ್​ 19
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್​ 22
ಮತದಾನ: ಡಿಸೆಂಬರ್​ 7
ಫಲಿತಾಂಶ: ಡಿಸೆಂಬರ್​ 11

ತೆಲಂಗಾಣ:
ನಾಮಪತ್ರ ಸಲ್ಲಿಕೆ: ನವೆಂಬರ್​ 19
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್​ 22
ಮತದಾನ: ಡಿಸೆಂಬರ್​ 7
ಫಲಿತಾಂಶ: ಡಿಸೆಂಬರ್​ 11

ಮಿಝೋರಾಂ:
ನಾಮಪತ್ರ ಸಲ್ಲಿಕೆ: ನವೆಂಬರ್​ 9
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್​ 14
ಮತದಾನ: ನವೆಂಬರ್​ 28
ಫಲಿತಾಂಶ: ಡಿಸೆಂಬರ್​ 11

ಮಧ್ಯ ಪ್ರದೇಶ:
ನಾಮಪತ್ರ ಸಲ್ಲಿಕೆ: ನವೆಂಬರ್​ 9
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್​ 14
ಮತದಾನ: ನವೆಂಬರ್​ 28
ಫಲಿತಾಂಶ: ಡಿಸೆಂಬರ್​ 11

ಛತ್ತಿಸ್​ಗಢ:
ಮೊದಲ ಹಂತ

ನಾಮಪತ್ರ ಸಲ್ಲಿಕೆ: ಅಕ್ಟೋಬರ್​ 23
ಹಿಂಪಡೆಯಲು ಕಡೆಯ ದಿನಾಂಕ: ಅಕ್ಟೋಬರ್​ 26
ಮತದಾನ: ನವೆಂಬರ್​ 12

ಎರಡನೇ ಹಂತ:
ನಾಮಪತ್ರ ಸಲ್ಲಿಕೆ: ನವೆಂಬರ್​ 2
ಹಿಂಪಡೆಯಲು ಕಡೆಯ ದಿನಾಂಕ: ನವೆಂಬರ್​ 5
ಮತದಾನ: ನವೆಂಬರ್​ 20
ಫಲಿತಾಂಶ: ಡಿಸೆಂಬರ್​ 11

ಕರ್ನಾಟಕ (ಉಪ ಚುನಾವಣೆಗಳು):
ನವೆಂಬರ್​ 3: ಜಮಖಂಡಿ, ರಾಮನಗರ (ವಿಧಾನಸಭೆ), ಶಿವಮೊಗ್ಗ, ಬಳ್ಳಾರಿ ಮಂಡ್ಯ (ಲೋಕಸಭೆ) ಉಪಚುನಾವಣೆಗಳು
ಫಲಿತಾಂಶ: ಡಿಸೆಂಬರ್​ 11

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ