ಕರಾವಳಿ ಕರ್ನಾಟಕ ವರದಿನವದೆಹಲಿ: 2019 ರ ಲೋಕಸಭೆ ಚುನಾವಣೆಗೆ ಇನ್ನು 6-7 ತಿಂಗಳುಗಳು ಬಾಕಿ ಇದ್ದು, ಎಬಿಪಿ ನ್ಯೂಸ್ ದೇಶ್ ಕಾ ಮೂಡ್ ಸಮೀಕ್ಷೆ ನಡೆಸಿದೆ. ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗುವುದು ಸಮೀಕ್ಷೆಯ ಫಲಿತಾಂಶಗಳಿಂದ ನಿಚ್ಚಳವಾಗಿದೆ.
2014 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಗೆ 300 ಕ್ಕೂ ಹೆಚ್ಚು ಸ್ಥಾನಗಳು ಬಂದಿದ್ದವು ಆದರೆ ಈ ಬಾರಿಯ ಚುನಾವಣೆಯಲ್ಲಿ ಎನ್ ಡಿಎ 58 ಸ್ಥಾನಗಳನ್ನು ಕಳೆದುಕೊಳ್ಳಲಿದ್ದು 276 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಇನ್ನು ಯುಪಿಎ ಹಿಂದಿನ ಚುನಾವಣೆಗಿಂತ ಸುಧಾರಣೆ ಕಾಣಲಿದ್ದು 115 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಆದರೆ ಯುಪಿಎಗಿಂತ ಇತರರು 151 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಯುಪಿಎಗಿಂತಲೂ ಹೆಚ್ಚು ಬಲಾಢ್ಯರಾಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಮೂಲಕ ತಿಳಿದುಬಂದಿದೆ.
ದಕ್ಷಿಣ ಭಾರತದಲ್ಲಿ ಯುಪಿಎ ಗೆ ಹೆಚ್ಚಿನ ಬೆಂಬಲವಿದ್ದು 129 ಸ್ಥಾನಗಳ ಪೈಕಿ ಎನ್ ಡಿಎ 21 ಸ್ಥಾನಗಳನ್ನು ಪಡೆದರೆ ಯುಪಿಎ 32 ಸ್ಥಾನಗಳನ್ನು ಪಡೆಯಲಿವೆ, ಪ್ರಾದೇಶಿಕ ಪಕ್ಷಗಳು 76 ಸ್ಥಾನಗಳನ್ನು ಗಳಿಸಲಿವೆ ಎನ್ನುತ್ತಿದೆ ಎಬಿಪಿ ನ್ಯೂಸ್ ಸಮೀಕ್ಷೆ
5 ಗ್ರಾ.ಪಂ.ಗಳನ್ನು ಸೇರಿಸಿ ಗ್ರೇಟರ್ ಉಡುಪಿ!