ಕುಮಟಾದಿಂದ ಕಾಣೆಯಾದ ತಾಯಿ-ಮಗ ವರ್ಷದ ಬಳಿಕ ಕಾರ್ಕಳದಲ್ಲಿ ಪತ್ತೆ

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ
: ಕಳೆದ ಒಂದು ವರ್ಷದ ಕುಮಟಾ ತಾಲೂಕಿನಿಂದ ಹಿಂದೆ ಕಾಣೆಯಾಗಿದ್ದ ತಾಯಿ ಹಾಗೂ ಮಗನನ್ನು ಕಾರ್ಕಳದಲ್ಲಿ ಪತ್ತೆ ಹಚ್ಚಿ ಕರೆತರುವಲ್ಲಿ ಕಾರವಾರದ ಡಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕುಮಟಾ ತಾಲೂಕಿನ ಕೋಡ್ಕಣಿಯ ಜುಜೆ ನರೋನಾ(40) ಎನ್ನುವವರು ತಮ್ಮ ಪತ್ನಿ ದೀಪಾ ನರೋನಾ(29) ಹಾಗೂ ಐದೂವರೆ ವರ್ಷದ ಮಗ ನೋಯಲ್ 2017ರ ಜೂನ್ 2 ರಂದು ಬೆಳಿಗ್ಗೆ ೪ ಗಂಟೆಯ ವೇಳೆಗೆ ಕಾಣೆಯಾಗಿದ್ದಾರೆ ಎಂದು ಕುಮಟಾ ಠಾಣೆಯಲ್ಲಿ 2017ರ ಜುಲೈ 15ರಂದು ಪ್ರಕರಣ ದಾಖಲಿಸಿದ್ದರು.

ಆದರೆ ಪ್ರಕರಣ ದಾಖಲಾಗಿ 1 ವರ್ಷ 3 ತಿಂಗಳುಗಳು ಕಳೆದರೂ ಈರ್ವರು ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಜಿಲ್ಲಾ ಅಪರಾಧ ವಿಭಾಗ(ಡಿಸಿಬಿ)ಕ್ಕೆ ವಹಿಸಲಾಗಿತ್ತು.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ಪಾಟೀಲ್ ಇವರ ಮಾರ್ಗದರ್ಶನದಲ್ಲಿ ಡಿಸಿಬಿ ಪೊಲೀಸ್ ನಿರೀಕ್ಷಕ ಶರಣಗೌಡ ವಿ. ಎಚ್. ಅವರು ಪ್ರಕರಣದ ತನಿಖೆ ಕೈಗೊಂಡು ಮಂಗಳವಾರದಂದು ಕಾಣೆಯಾದ ಮಹಿಳೆ ದೀಪಾ ನರೋನಾ(30) ಹಾಗೂ ಆಕೆಯ ಮಗ ನೋಯಲ್(7) ಇವರನ್ನು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪತ್ತೆ ಹಚ್ಚಿ ಕಾರವಾರಕ್ಕೆ ಕರೆತಂದಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಡಿಸಿಬಿ ಸಿಬ್ಬಂದಿಗಳಾದ ಸುದರ್ಶನ ವಿ. ನಾಯ್ಕ, ಸಿಎಚ್‌ಸಿ ಹನುಮಂತ ಕಬಾಡಿ, ಶರತಕುಮಾರ ಬಿ.ಎಸ್. ಹಾಗೂ ಉಮೇಶ ನಾಯ್ಕ ಪಾಲ್ಗೊಂಡಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ