ಮದುವೆ, ಸಮಾರಂಭಗಳಲ್ಲಿ ವೆಲ್ ಕಮ್ ಡ್ರಿಂಕ್ ಆಗಿ 'ಸೇಂದಿ'

ಕರಾವಳಿ ಕರ್ನಾಟಕ ವರದಿ

ಹುಬ್ಬಳ್ಳಿ:
ಮಲೆನಾಡು ಮತ್ತು ಬಯಲು ಸೀಮೆಯ ಹಲವೆಡೆ  ಮದುವೆ ಹಾಗೂ ಗೃಹ ಪ್ರವೇಶ  ಸಮಾರಂಭಗಳಲ್ಲಿ ವೆಲ್ ಕಮ್ ಡ್ರಿಂಕ್ ಆಗಿ ತಂಪು  ಪಾನೀಯಗಳ ಬದಲು ಸೇಂದಿ ಬಳಕೆ ಮಾಡುತ್ತಿರುವ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.

ಎರಡು ತಿಂಗಳ ಹಿಂದೆ ಕುಣಿಗಲ್ ಮತ್ತು ತುಮಕೂರಿನಿಂದ ಸುಮಾರು 1,500 ಗ್ಲಾಸ್ ಸೇಂದಿ ಸಂಗ್ರಹಿಸಿ ಹೊಸಪೇಟೆಯಲ್ಲಿ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ನೀಡಲಾಗಿತ್ತು. ಇದೇ ರೀತಿಯ ಟ್ರೆಂಡ್ ಈಗ ಶಿವಮೊಗ್ಗ, ಭದ್ರಾವತಿ, ಚಿತ್ರದುರ್ಗ ಹಾಗೂ ಹೊಸಪೇಟೆಗಳಲ್ಲಿ ಚಾಲ್ತಿಗೆ ಬರುತ್ತಿದೆ. ಇದರಲ್ಲಿ ಆಲ್ಕೋಹಾಲ್  ಪ್ರಮಾಣ ಶೂನ್ಯ ಪ್ರಮಾಣದಲ್ಲಿ ಇರುವುದರಿಂದ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತಿದೆ.

ತಮ್ಮ ಪುತ್ರನ ಮದುವೆಯಲ್ಲಿ ವೆಲ್ ಕಮ್ ಡ್ರಿಂಕ್ ಆಗಿ  ಸೇಂದಿ ಕೊಡಲಾಗಿತ್ತು, ಸೇಂದಿ ಕೊಟ್ಟಿದ್ದಕ್ಕೆ ಕೆಲವು ಅತಿಥಿಗಳು ಈ ಬಗ್ಗೆ ನಮ್ಮನ್ನು ಕೇಳಿದರು,  ಕೆಲವರು ಅಚ್ಚರಿ ವ್ಯಕ್ತ ಪಡಿಸಿದರು, ಆದರೆ ತೆಂಗಿನಕಾಯಿ ಪಾನೀಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಿಂದ ಹಲವು ಲಾಭಗಳಿವೆ, ಇದರ ಬಗ್ಗೆ ನಮ್ಮ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಎಂಜಿನೀಯರ್ ದಿವಾಕರ್ ಎಂಬುವರು ಹೇಳಿದ್ದಾರೆ.

2016 ರಲ್ಲಿ  ನೀರಾ ನೀತಿ ಜಾರಿಗೆ ತಂದು ಬಳಕೆಗೆ ಅನುಮತಿ ನೀಡಲಾಯಿತು, ಸಭೆ ಸಮಾರಂಭಗಳಲ್ಲಿ ಸೇಂದಿ ಬಳಕೆ ಟ್ರೆಂಡ್ ಬಗ್ಗೆ  ಹಲವು ಪ್ರಶ್ನೆಗಳನ್ನು ಕೇಳುತ್ತಾರೆ,  ಸೇಂದಿಲ್ಲಿ  ಅತ್ಯಧಿಕ ಪ್ರಮಾಣದಲ್ಲಿ ವಿಟಮಿನ್ ಇವೆ,  ತಂಪು ನೀರಾವನ್ನು ಸರ್ವ್ ಮಾಡುವುದು ಇತ್ತೀಚಿನ ಟ್ರೆಂಡ್ ಆಗಿದೆ,  ಯಾರಾದರೂ ನನ್ನನ್ನು ಮದುವೆ, ಸಮಾರಂಭಗಳಿಗೆ ಆಹ್ವಾನಿಸಿದರೇ, ಅತಿಥಿಗಳಿಗೆ ವೆಲ್ ಕಮ್ ಡ್ರಿಂಕ್ ಆಗಿ ಸೇಂದಿ ಕೊಡಲು ಸಲಹೆ ನೀಡುತ್ತೇನೆ ಎಂದು ದಿವಾಕರ್ ಹೇಳಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ