ಮೂಡುಬಿದಿರೆ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಕೊಲೆ ಯತ್ನ

ಕರಾವಳಿ ಕರ್ನಾಟಕ  ವರದಿ

ಮೂಡುಬಿದಿರೆ:
ಹೂವಿನ ವ್ಯಾಪಾರಿ, ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದ ಆರೋಪಿಯ ಮೇಲೆ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ತಲವಾರು ಹಲ್ಲೆಗೈದು ಕೊಲೆಗೆ ಯತ್ನಿಸಿದ ಘಟನೆ ಬೆಳಿಗ್ಗೆ ವರದಿಯಾಗಿದೆ.

ಗಂಟಾಲ್ ಕಟ್ಟೆ ಮಸೀದಿಯ ಕಟ್ಟಡವೊಂದರಲ್ಲಿ ಹೊಟೇಲ್ ನಡೆಸುವ ಇಮ್ತಿಯಾಜ್ ಎಂಬವರ ಮೇಲೆ ಚಹಾ ಕುಡಿಯುವ ನೆವದಲ್ಲಿ ನುಗ್ಗಿದ ತಂಡವು ಹಿಂದಿನಿಂದ ತಲವಾರುಗಳಿಂದ ತಲೆ ಹಾಗೂ ಬೆನ್ನಿಗೆ ಹಲ್ಲೆಗೈದಿದೆ. ಹಲ್ಲೆ ನಡೆಸುವ ಸಂದರ್ಭ ಹೊಟೇಲ್ ನಲ್ಲಿದ್ದ ವ್ಯಕ್ತಿಯೋರ್ವರು ತಡೆಯಲು ಮುಂದಾಗಿದ್ದು, ಅವರ ಮೇಲೆಯೂ ದಾಳಿ ನಡೆಸಲಾಗಿದೆ.

ಹಲ್ಲೆಗೊಳಗಾದ ಇಮ್ತಿಯಾಜ್ ಅವರು ಸಮೀಪದ ಮನೆಯೊಂದಕ್ಕೆ ನುಗ್ಗಿ ಪಾರಾಗಿದ್ದು, ಅವರನ್ನು ಇದೀಗ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗಂಭೀರ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಇಮ್ತಿಯಾಜ್ ಅವರ ಮೇಲೆ ಬೆಳಗಿನ ಜಾವ ಐದುವರೆ ಸಂದರ್ಭ ಹಲ್ಲೆ ನಡೆಯುವ ಸಂದರ್ಭ ತಂಡದಿಂದ ದಾಳಿಗೊಳಗಾದ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

2015ರಲ್ಲಿ ಮೂಡುಬಿದಿರೆಯಲ್ಲಿ ನಡೆದ ಪರಿವಾರ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣದಲ್ಲಿ ಇಮ್ತಿಯಾಜ್ ಆರೋಪಿಯಾಗಿದ್ದು, ಹೈಕೋರ್ಟ್ ಜಾಮೀನು ನೀಡಿತ್ತು. ಪ್ರಶಾಂತ್ ಕೊಲೆಗೆ ಸಂಬಂಧಿಸಿ  ದ್ವೇಷದಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ