ಮಂಗಳೂರು ಯುವತಿಗೆ ಲೈಂಗಿಕ ದೌರ್ಜನ್ಯದ ವಿಡೀಯೊ: ಆರೋಪಿ ಸೆರೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು
: ಯುವತಿಯರನ್ನು ತನ್ನ ಅಪಾರ್ಟ್ಮೆಂಟ್ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನೀಡಿ ವಿಡೀಯೋ ಚಿತ್ರೀಕರಿಸುತ್ತಿದ್ದ ಆರೋಪದಲ್ಲಿ ಕೇರಳ ಮೂಲದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ವ್ಯಾಸನಗರದ ಮಧ್ಯವಯಸ್ಕ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನದೆಸಿದ್ದಾರೆ.
ಸಂತ್ರಸ್ತ ಯುವತಿಯೋರ್ವರು ತನಗಾದ ದೌರ್ಜನ್ಯವನ್ನು ಸಾಮಾಜಿಕ ಕಾರ್ಯಕರ್ತರ ಬಳಿ ದೂರಿದ್ದರು. ಈ ವ್ಯಕ್ತಿಯೊಡನೆ ದೂರವಾಣಿಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತರು ಉಪಾಯದಿಂದ ಆತನನ್ನು ಪೊಲೀಸ್ ಬಲೆಯಲ್ಲಿ ಕೆಡವಿದ್ದಾರೆ.

ಕದ್ರಿ ಪೊಲೀಸರು ಬರ್ಕೆ ಪೊಲೀಸರಿಗೆ ಆರೋಪಿ ವ್ಯಕ್ತಿಯನ್ನು ಹಸ್ತಾಂತರಿಸಿದ್ದು, ತನಿಖೆ ಪ್ರಗತಿಯಲ್ಲಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ