ಕುಂದಾಪುರ: ಕಾರಿಗೆ ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಬೈಕ್ ಸವಾರ ದಾರುಣ ಸಾವು

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ರಸ್ತೆಯಲ್ಲಿ ಅಡ್ಡಬಂದ ಹಾವನ್ನು ತಪ್ಪಿಸಲು ಹೋಗಿ ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದಾಗ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಭಾನುವಾರ ಮಧ್ಯಾಹ್ನ ಕೋಟೇಶ್ವರ ಬಳಿಯ ಕಾಳಾವರದಲ್ಲಿ ಈ ದುರ್ಘಟನೆ ನಡೆದಿದ್ದು ಮೃತರನ್ನು ಹಾಲಾಡಿಯ ಗ್ಯಾರೇಜ್ ಮಾಲಕ ರುದ್ರ ಆಚಾರ ಅವರ ಮಗ ಗಂಗಾಧರ (34) ಎಂದು ಗುರುತಿಸಲಾಗಿದೆ.

ಹಾಲಾಡಿಯಿಂದ ಕೋಟೇಶ್ವರದತ್ತ ಸಾಗುತ್ತಿದ್ದ ಕಾರು ಕಾಳಾವರದಲ್ಲಿ ಮಾರ್ಗ ಮಧ್ಯೆ ಹಾವು ಬಂತೆಂದು ಚಾಲಕ ದಿಢೀರನೆ ಬ್ರೇಕ್  ಹಾಕಿದ್ದಾರೆ. ಅದೆ ವೇಳೆ ಹಿಂದಿನಿಂದ ಬರುತ್ತಿದ್ದ ಗಂಗಾಧರ ಅವರ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಅದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಗಂಗಾಧರ ಅವರ ದೇಹದ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಗಂಗಾಧರ ಮೃತಪಟ್ಟಿದ್ದಾರೆ. ಎನ್ನಲಾಗಿದೆ.

ಮೃತ ಗಂಗಾಧರ ಎರಡು ವರ್ಷದ ಹಿಂದಷ್ಟೆ ಮದುವೆಯಾಗಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ