70ವರ್ಷದ ವೃದ್ಧನಿಂದ ಹೋಂ ನರ್ಸ್ ಮೇಲೆ ಅತ್ಯಾಚಾರ

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ:
ಅನಾರೋಗ್ಯ ಪೀಡಿತ ಮಹಿಳೆಯ ಆರೈಕೆಗೆ ಬಂದಿದ್ದ 39 ವರ್ಷದ ಹೋಂ ನರ್ಸ್ ಒಬ್ಬರ ಮೇಲೆ 70 ವರ್ಷದ ವೃದ್ಧನೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಸಾವಂತವಾಡದಲ್ಲಿ ನಡೆದಿದೆ.

ದಿನಕರ ಸಾವಂತ ಎಂಬ ವೃದ್ಧ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದು ಈತನ ತಂಗಿಯು ಅನಾರೋಗ್ಯ ಪೀಡಿತರಾಗಿದ್ದರು. ಹೀಗಾಗಿ ಅವರನ್ನು ನೋಡಿಕೊಳ್ಳಲು ಪೂನಾದಿಂದ ಹೋಂ ನರ್ಸ್ ಒಬ್ಬರನ್ನು ಮನೆಗೆ ಕರೆಯಿಸಲಾಗಿತ್ತು.

ನರ್ಸ್ ಅನ್ನು ತನ್ನ ರೂಮಿಗೆ ಬಲವಂತವಾಗಿ ಎಳೆದೊಯ್ದ ವೃದ್ಧ, ಅತ್ಯಾಚಾರ ನಡೆಸಿದ್ದಾನೆ ಎಂದು ಚಿತ್ತಾಕುಲ ಠಾಣೆಯಲ್ಲಿ ಅತ್ಯಾಚಾರಕ್ಕೊಳಗಾದ ನರ್ಸ್  ಪ್ರಕರಣ ದಾಖಲಿಸಿದ್ದಾರೆ. ವೃದ್ಧನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ