ಯುವತಿಯ ತಂದೆಯಿಂದ ಥಳಿತ: ಮನನೊಂದ ಉಡುಪಿಯ ಯುವಕ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಪ್ರೀತಿಸುತ್ತಿದ್ದ ಯುವತಿಯ ತಂದೆ ಚಪ್ಪಲಿಯಿಂದ ಥಳಿಸಿ ಅವಮಾನಿಸಿದ್ದರಿಂದ ನೊಂದ ಯುವಕನೋರ್ವ ಆತ್ಮಹತ್ಯೆಗೈದ ಕಳವಳಕಾರಿ ಸಂಗತಿ ವರದಿಯಾಗಿದೆ.

ಪುತ್ತೂರಿನ ನಯಂಪಳ್ಳಿ ನಿವಾಸಿ ಸೂರಜ್ ಸುವರ್ಣ(22) ಎಂಬವರು ಅವಮಾನದಿಂದ ಹತಾಶರಾಗಿ ಇಲಿಪಾಶಾಣ ಕುಡಿದು ಆತ್ಮಹತ್ಯೆಗೈದಿದ್ದಾರೆ. ಕೆಮ್ತೂರಿನ ವಿಷ್ಣಮೂರ್ತಿ ದೇವಸ್ಥಾನದ ಬಳಿ ಇಲಿಪಾಷಣ ಸೇವಿಸಿದ ಸೂರಜ್ ಅವರನ್ನು ಮಣಿಪಾಲ ಕೆಎಂಸಿ ಅಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆನೀಡಿದ್ದು,  ಚಿಕಿತ್ಸೆ ಫಲಕಾರಿಯಾಗದೆ  ಸಾವಪ್ಪಿದ್ದಾರೆ.

ಸೂರಜ್ ಅವರು ಒಂದು ವರ್ಷದಿಂದ ವಿರೂಪಾಕ್ಷ ಎಂಬವರ ಮಗಳನ್ನು ಪ್ರೀತಿಸುತ್ತಿದ್ದರೆನ್ನಲಾಗಿದ್ದು, ಅದಕ್ಕೆ ವಿರೂಪಾಕ್ಷ ಪ್ರಬಲ ವಿರೋಧ ಹೊಂದಿದ್ದರು. ಇದೇ ದ್ವೇಷದಿಂದ  ಸೂರಜ್  ಕೆಲಸ ಮಾಡುತ್ತಿದ್ದ ಉಡುಪಿಯ ಲಯನ್ಸ್ ಸರ್ಕಲ್ ಬಳಿಯ ಕರ್ಟನ್ ಪ್ಯಾರಡೈಸ್ ಅಂಗಡಿಗೆ ತೆರಳಿ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕಾಲಿನ ಚಪ್ಪಲಿಯಿಂದ ಅವರ ಕೆನ್ನೆಗೆ  ವಿರೂಪಾಕ್ಷ ಅವರು ಹೊಡೆದಿದ್ದಾರೆ. ಈ ಅವಮಾನ, ಕಿರುಕುಳದಿಂದ ತೀವೃವಾಗಿ ಮನನೊಂದ ತನ್ನ ಸಹೋದರ ಆತ್ಮಹತ್ಯೆಗೆ ಶರಣಾಗಿರುವುದಾಗಿ ಸೂರಜ್ ಸಹೋದರ ಮನೋಜ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ