ಗಣೇಶ್ ಬಸ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಾಗಾಟ: ನಾಲ್ವರು ಆರೋಪಿಗಳ ಬಂಧನ

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಕಾರವಾರ:
ಖಾಸಗಿ ಬಸ್ಸೊಂದರಲ್ಲಿ ಗೋವಾದಿಂದ ಮಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಪಡೆದ ಅಬಕಾರಿ ಅಧಿಕಾರಿಗಳು ತಾಲೂಕಿನ ಮಾಜಾಳಿಯ ತನಿಖಾ ಠಾಣೆಯಲ್ಲಿ ಗಣೇಶ ಟ್ರಾವೇಲ್ಸ್ ಖಾಸಗಿ ಬಸ್ ತಪಾಸಣೆಗೆ ಒಳಪಡಿಸಿ ಒಟ್ಟೂ 7 ಪ್ಯಾಕೇಟಗಳಲ್ಲಿದ್ದ 7 ಕೆಜಿ ಗಾಂಜಾವನ್ನು ಪತ್ತೆ ಹಚ್ಚಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದು 1,79,250 ರೂ. ಗಾಂಜಾ ಹಾಗೂ 30 ಲಕ್ಷ ರೂ. ಮೌಲ್ಯದ ಖಾಸಗಿ ಬಸ್ ಜಪ್ತಿ ಪಡಿಸಿಕೊಂಡಿದ್ದಾರೆ.

ಈ ವೇಳೆ ಬಸ್ಸಿನಲ್ಲಿದ್ದ ಆರೋಪಿಗಳಾದ ಕೇರಳ ಕಾಸರಗೋಡು ಮೂಲದ ಉಮ್ಮರ ಖಾಸಿಂ ಬೆಜ್ಜಾಂಗಲ್, ಅಬ್ದುಲ್ ಸಾಜಿದ್ ಹಾಗೂ ಬಸ್ ಚಾಲಕ ಅನ್ಸನ್ ಡಿಸೋಜಾನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಬಳಿಕ ವಶಕ್ಕೆ ಪಡೆದ ಆರೋಪಿಗಳಿಬ್ಬರನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅಕ್ರಮ ಗಾಂಜಾವನ್ನು ಕೇರಳದ ಕಾಸರಗೋಡಿನ ಕಿಂಗ್ ಪಿನ್ ಲತೀಪ್ ಉಮರ್ ನಿರ್ದೇನದಂತೆ ಗೋವಾದಿಂದ ಮಂಗಳೂರಿನಲ್ಲಿರುವ ಅಬ್ದುಲ್ ಕರೀಂ ಎನ್ನುವವನಿಗೆ ಸರಬರಾಜು ಮಾಡಲು ಸೂಚಿಸಿದ್ದ ಎನ್ನುವ ಮಾಹಿತಿಯನ್ನು ಆರೋಪಿಗಳು ನೀಡಿದ್ದಾರೆ.

ಈ ಮಾಹಿತಿ ಆಧರಿಸಿ ಕರೀಂ ಬಂಧನಕ್ಕೆ ಬಲೆ ಬೀಸಿದ ಅಧಿಕಾರಿಗಳು ಬಂಧಿರ ಇಬ್ಬರು ಆರೋಪಿಗಳ ಸಮೇತ ಇಲಾಖೆಯ ವಾಹನದಲ್ಲೇ ಮಂಗಳೂರಿಗೆ ರವಿವಾರ ಬೆಳಗ್ಗೆಯೇ ತಲುಪಿ ಅಲ್ಲಿದ್ದ ಅಬ್ದುಲ್ ಕರೀಂ ನನ್ನು ಮಂಗಳೂರು ನಗರದಲ್ಲೇ ಬಂಧಿಸಿದ್ದಾರೆ. ಬಳಿಕ ಕಾರವಾರಕ್ಕೆ ಮೂವರು ಆರೋಪಿಗಳನ್ನು ಕರೆದು ತರಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎಲ್. ಎ. ಮಂಜುನಾಥ ಮಾಹಿತಿ ನೀಡಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ