ರಾ. ಹೆದ್ದಾರಿ 66ರಲ್ಲಿ ಭೀಕರ ಅಪಘಾತ: ತಾಯಿ-ಮಗಳು ಸೇರಿ ಐವರು ಸ್ಥಳದಲ್ಲೇ ಸಾವು

ರವಿತೇಜ ಕಾರವಾರ/ ಕರಾವಳಿ ಕರ್ನಾಟಕ ವರದಿ

ಹೊನ್ನಾವರ:
ಟ್ಯಾಂಕರ್ ಹಾಗೂ ಪ್ರಯಾಣಿಕರ ಟೆಂಪೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃತಪಟ್ಟು 7 ಮಂದಿ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಸಂಜೆ ನಡೆದಿದೆ.

ನಾಗರಾಜ ನಾಯ್ಕ (28), ಟೆಂಪೋ ಚಾಲಕ ಕಮಲಾಕರ ಭಂಡಾರಿ(ಬಾಬು)(35), ಮೋಹನ ಮೇಸ್ತಾ(50), ಸುಮತಿ ಮಡಿವಾಳ(32) ಹಾಗೂ ಆಕೆಯ ಮಗಳು ಸಿಂಚನಾ ಮಡಿವಾಳ(6) ಎಂದು ಗುರುತಿಸಲಾಗಿದೆ.

ಕುಮಟಾದಿಂದ ಪ್ರಯಾಣಿಕರನ್ನು ಹೊತ್ತು ಹೊನ್ನಾವರಕ್ಕೆ ಸಾಗುತ್ತಿದ್ದ ಟೆಂಪೋ ಹಾಗೂ ಹೊನ್ನಾವರದಿಂದ ಕಾರವಾರದೆಡೆ ಚಲಿಸುತ್ತಿದ್ದ ಟ್ಯಾಂಕರ್ ನಡುವೆ ಕರ್ಕಿಮಠದ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದ ತೀವೃತೆಗೆ ಟೆಂಪೋ ದಲ್ಲಿದ್ದ ತಾಯಿ ಮಗಳು ಸೇರಿ ಮೂವರು ಪ್ರಯಾಣಿರು ಹಾಗೂ ಎರಡೂ ವಾಹನಗಳ ಚಾಲಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಟೆಂಪೋದಲ್ಲಿದ್ದ ಸುಮಾರು 15 ಮಂದಿಗೆ ಗಾಯವಾಗಿದ್ದು ಇವರಲ್ಲಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ