ಬೆಂಗಳೂರಿನಲ್ಲಿ ಅಪಘಾತ: ಕುಂದಾಪುರದ ತಾಯಿ ಮಗು ದಾರುಣ ಸಾವು

ಕರಾವಳಿ ಕರ್ನಾಟಕ ವರದಿ

ಕುಂದಾಪುರ
: ಬೆಂಗಳೂರು ನಗರದಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಕುಂದಾಪುರದ ತಾಯಿ ಮತ್ತು ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ಸೆಪ್ಟೆಂಬರ್ 13ರಂದು ಹೆಬ್ಬಾಳದ ಲುಂಬಿನಿ ಗಾರ್ಡ್‌ನ್ ಬಳಿ ರಾತ್ರಿ 11 ಗಂಟೆಗೆ ಈ ಅಪಘಾತ ಸಂಭವಿಸಿದೆ. ಮೃತರನ್ನು ವಂಡ್ಸೆ ನಿವಾಸಿ ಸುರೇಖಾ (30) ಮತ್ತು ಅವರ ಮಗು ಆದ್ಯಾ ಎಂದು ಗುರುತಿಸಲಾಗಿದೆ. ಸುರೇಖಾ ಪತಿ ರಘು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ನಗರದಲ್ಲಿ ಬೇಕರಿಯೊಂದನ್ನು ನಡೆಸುತ್ತಿರುವ ರಘು ಸೆಪ್ಟೆಂಬರ್ 13ರಂದು ಪತ್ನಿ ಮತ್ತು ಮಗುವಿನ ಜೊತೆ ಪೂಜೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದರು. ಬ್ಯಾಟರಾಯನಪುರದಿಂದ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಲುಂಬಿನಿ ಗಾರ್ಡನ್ ತಲುಪಿದಾಗ ವಾಹನವೊಂದು ಸ್ಕೂಟರ್‌ಗೆ ಢಿಕ್ಕಿಯಾಗಿದೆ.

ಢಿಕ್ಕಿಯ ರಭಸಕ್ಕೆ ಸುರೇಖಾ ಮತ್ತು ಮಗು ರಸ್ತೆಗೆ ಎಸೆಯಲ್ಪಟ್ಟಿದ್ದು ಢಿಕ್ಕಿಯಾದ ವಾಹನ ಅವರ ಮೇಲೆ ಹರಿದು ಹೋಗಿದೆ. ಸುರೇಖಾ ಮತ್ತು ಮಗಳು ಆದ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ರಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಢಿಕ್ಕಿಯಾದ ವಾಹನವನ್ನು ಪೊಲೀಸರು ಇನ್ನಷ್ಟೆ ಪತ್ತೆಹಚ್ಚಬೇಕಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ