ಭೀಕರ ಅಪಘಾತ: ಶ್ರೀ ದುರ್ಗಾಂಬ ಬಸ್ ಮಾಲಕ ಸುನಿಲ್ ಚಾತ್ರ ದಾರುಣ ಮೃತ್ಯು

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ತಮಿಳುನಾಡಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕುಂದಾಪುರದ ಶ್ರೀ ದುರ್ಗಾಂಬ ಬಸ್ ಕಂಪೆನಿಯ ಪಾಲುದಾರರಲ್ಲಿ ಓರ್ವರಾದ ಸುನಿಲ್ ಚಾತ್ರ (41) ಮೃತಪಟ್ಟಿದ್ದಾರೆ.

ತಮಿಳುನಾಡಿನ ಕರೂರ್‌ನಲ್ಲಿ ತಮ್ಮ ಸಂಸ್ಥೆಯ ಹೊಸ ಬಸ್ ಒಂದರ ಬಾಡಿ ಬಿಲ್ಡಿಂಗ್ ಕೆಲಸವನ್ನು ನೋಡಲು ಹೋಗಿ ವಾಪಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಪರಮತಿ ವೆಲೂರ್ ಬೈಪಾಸ್ ಎಂಬಲ್ಲಿ ಈ ಅಪಘಾತ ಸಂಭವಿಸಿದ್ದು ಸ್ಥಳದಲ್ಲೆ ಸುನಿಲ್ ಚಾತ್ರ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆಗೆ ಅವರು ಪ್ರಯಾಣಿಸುತ್ತಿದ್ದ ಪಜೆರೊ ಸ್ಪೋರ್ಟ್ಸ್ ವರ್ಷನ್ ಎಸ್‌ಯುವಿ ಸಂಪೂರ್ಣ ನಜ್ಜುಗುಜ್ಜಾಗಿದೆ.






ಕುಂದಾಪುರದ ಶ್ರೀ ದುರ್ಗಾಂಬ ಸಾರಿಗೆ ಸಂಸ್ಥೆಯ ಪಾಲುದಾರರಲ್ಲಿ ಓರ್ವರಾಗಿರುವ ಸುನಿಲ್ ಚಾತ್ರ ಇತ್ತೀಚೆಗೆ ಬಸ್ ಉದ್ಯಮದಲ್ಲಿ ಯಶಸ್ಸಿನತ್ತ ದಾಪುಗಾಲು ಹಾಕಿದ್ದರು. ಹೆಚ್ಚಾಗಿ ಛತ್ತೀಸ್‌ಗಢದಲ್ಲಿ ವಾಸವಾಗಿರುತ್ತಿದ್ದ ಸುನಿಲ್ ಚಾತ್ರ ಅಲ್ಲಿ ಸರ್ಕಾರ ಜೊತೆ ಒಪ್ಪಂದದ ಮೇರೆಗೆ ಬೃಹತ್ ಸಾರಿಗೆ ಉದ್ಯಮ ನಡೆಸುತ್ತಿದ್ದರು. ಜೊತೆಗೆ ಕುಂದಾಪುರದಲ್ಲೂ ಹೊಸ ಪ್ರತ್ಯೇಕ ಯೂನಿಟ್ ತೆರೆದು ತಮ್ಮ ಉದ್ಯಮವನ್ನು ವಿಸ್ತರಿಸುವ ಸಿದ್ಧತೆಯಲ್ಲಿದ್ದರು.  

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ