ಮೂಡಬಿದಿರೆಯ ಆಳ್ವಾಸ್ ಹಾಸ್ಟೆಲ್‌ನಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ

ಮೂಡಬಿದಿರೆ:
ವಿದ್ಯಾರ್ಥಿನಿಯರ ಆತ್ಮಹತ್ಯೆಗೆ ಕುಖ್ಯಾತವಾಗಿರುವ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‌ನಲ್ಲಿ ಇನ್ನೋರ್ವ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಿನುತಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಬೆಂಗಳೂರಿನ ರಾಮಚಂದ್ರ ಎಂಬವರ ಪುತ್ರಿಯಾಗಿರುವ ವಿನುತಾ ಆಳ್ವಾಸ್ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಸೆಪ್ಟೆಂಬರ್ 12ರ ಬುಧವಾರ ವಿನುತಾ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಆತ್ಮಹತ್ಯೆಗೆ ಕಾರಣಗಳು ತಿಳಿದುಬಂದಿಲ್ಲ.

ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮೂಡಬಿದಿರೆಯ ಮೋಹನ್ ಆಳ್ವ ಅವರ ಒಡೆತನದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಲ್ಲಿ ಹಲವು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ಮೂಡಬಿದಿರೆಯ ಕಾವ್ಯ ಎಂಬ ಯುವತಿಯ ನಿಗೂಢ ಸಾವು ಕರಾವಳಿ ಸೇರಿದಂತೆ ಕರ್ನಾಟಕದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಸ್ಥೆಯ ಹಾಸ್ಟೆಲ್‌ಗಳಲ್ಲಿ ನಡೆದ ಹಲವು ಸಾವುಗಳು ನಿಗೂಢವಾಗಿವೆ ಎಂದು ಸಾರ್ವಜನಿಕ ವಲಯದಿಂದ ಆರೋಪ ಆಗಲೂ ಕೇಳಿಬಂದಿತ್ತು. 

ಇದನ್ನೂ ಓದಿ:
►►ಮೂಡುಬಿದಿರೆ: 5ನೇ ಮಹಡಿಯಿಂದ ಜಿಗಿದು ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ:
http://bit.ly/2rIRRam
►►ಆಳ್ವಾಸ್ ಮೂಡಬಿದಿರೆ. ಹಾಸ್ಟೆಲೋ ಅಥವಾ ವಿದ್ಯಾರ್ಥಿನಿಯರ ನೇಣು ಬಿಗಿವ ತಾಣವೊ?: http://bit.ly/2vwtw8X
►►ಮೂಡಬಿದಿರೆ: ಆಳ್ವಾಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ: http://bit.ly/2FhTNcw
►►ಕಾವ್ಯಾ ಸಾವು: ಮೋಹನ್ ಆಳ್ವರಿಗೆ ಬಹಿರಂಗ ಬೆಂಬಲ ಸಾರಿದ ಬಿಜೆಪಿ: http://bit.ly/2f8OinS
►►ಕಾವ್ಯಾ ಪ್ರಕರಣದ ಗೊಂದಲಗಳಿಗೆ ತೆರೆ ಎಳೆಯಿರಿ: ಎಬಿವಿಪಿ ಕುಂದಾಪುರ: http://bit.ly/2hneo7i
►►ನುಡಿಸಿರಿ ಸಂಘಟಕರಿಗೆ ಕಾವ್ಯಾಳ ಕುರಿತು ನುಡಿಗಳೇ ಇಲ್ಲದಾಯಿತೆ?: http://bit.ly/2ugxOMo
►►ನನ್ನ ಮಗಳ ಸಾವಿಗೆ ದೈಹಿಕ ಶಿಕ್ಷಕ ಕಾರಣ: ಕಾವ್ಯಾ ತಾಯಿ ಬೇಬಿ ಆರೋಪ: http://bit.ly/2f3KqVo
►►ಜಸ್ಟೀಸ್ ಫಾರ್ ಕಾವ್ಯಾ: ಕುಂದಾಪುರದಲ್ಲಿ ಬೀದಿಗಳಿದ ಸಹಸ್ರಾರು ವಿದ್ಯಾರ್ಥಿಗಳು: http://bit.ly/2tZQlkU
►►ಕಾವ್ಯಾ ಸಾವು: ಮೋಹನ್ ಆಳ್ವಾ ಕಥೆ ಹೇಳುತ್ತಿದ್ದಾರೆಯೆ?: http://bit.ly/2wesUki
►►ಕಾವ್ಯಾಳದ್ದು ಆತ್ಮಹತ್ಯೆಯಂತೆ. ಮರಣೋತ್ತರ ವರದಿ ಬಂದಿದೆಯಂತೆ: ಪೊಲೀಸ್ ಮೂಲಗಳು: http://bit.ly/2ub16Mq
►►ಕಾವ್ಯಾ ಸಾವು: ಆಳ್ವಾಸ್ ಹೆಸರಿಗೆ 'ಮಸಿ ಬಳಿಯುವುದನ್ನು' ನಿಲ್ಲಿಸಲು ಎಚ್ಡಿಕೆ ಕರೆ: http://bit.ly/2u9pwWR
►►‘ಆಳ್ವಾಸ್’ ಕಾವ್ಯ ನಿಗೂಢ ಸಾವು: ಸಿಬಿಐ ತನಿಖೆಗೆ ಆಗ್ರಹ: http://bit.ly/2v8ZF5x
►►ಪೊಲೀಸರೆ ವಿದ್ಯಾರ್ಥಿನಿ ಕಾವ್ಯ ಪ್ರಕರಣ ಮುಚ್ಚಿಹಾಕದಿರಿ: ಸಿ.ಎಫ್.ಐ http://bit.ly/2vgush
►►ಕಾವ್ಯಾಳದು ಆತ್ಮಹತ್ಯೆ, ಕೊಲೆಯಲ್ಲ: ಮೂಡುಬಿದಿರೆ ಪೊಲೀಸ್: http://bit.ly/2hb2Xj0
►►ಕಾವ್ಯಾ ಸಾವಿಗೆ ಕೊಲೆ ಎನ್ನೋದಕ್ಕೆ ಅರ್ಥವಿದೆಯೆ? http://bit.ly/2uKVbzw
►►ಆಳ್ವಾಸ್ ವಿದ್ಯಾರ್ಥಿನಿ, ಬ್ಯಾಡ್ಮಿಂಟನ್ ಚಾಂಪಿಯನ್ ನಿಗೂಢ ಸಾವು: ಕೊಲೆ ಆರೋಪ http://bit.ly/2uDb0tB
►►ಆರನೇ ಮಹಡಿಯಿಂದ ಜಿಗಿದು ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2ev592K
►►ಆಳ್ವಾಸ್ ವಿದ್ಯಾರ್ಥಿನಿ ಕಾಲೇಜಲ್ಲೇ ಸಾವು! http://bit.ly/1KlK1AS
►►ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2tPy30R
►►ವಿದ್ಯಾರ್ಥಿನಿ ಆತ್ಮಹತ್ಯೆ: 4ನೇ ದಿನಕ್ಕೆ ಪ್ರತಿಭಟನೆ http://bit.ly/2mdZ4XZ
►►ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2nQnUB5
►►ಪರೀಕ್ಷೆ ಫಲಿತಾಂಶದಿಂದ ನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2qGXXDg
►►ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ: ಡೆತ್ ನೋಟಲ್ಲಿ ಏನಿದೆ? http://bit.ly/2nqiUEl

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ