ಅನಿರ್ದಿಷ್ಠಾವಧಿ ಉಪವಾಸ ಅಂತ್ಯಗೊಳಿಸಿದ ಹಾರ್ದಿಕ್ ಪಟೇಲ್

ಕರಾವಳಿ ಕರ್ನಾಟಕ ವರದಿ

ಅಹಮದಾಬಾದ್
: ಪಟೇಲ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಬುಧವಾರ ತಮ್ಮ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.

ಪಟೇಲ್ ಸಮುದಾಯದ ಎರಡು ಮುಖ್ಯ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳಾದ ಖೋಡಾಲ್ ಧಾಮ್ ಹಾಗೂ ಉಮ್ಯಾಧಾಮ್ ಸಂಚಾಲಕ ಮನೋಜ್ ಪನಾರಾ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ.

ಪಟೇಲ್ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಬೇಕು, ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಹಾರ್ದಿಕ್ ಪಟೇಲ್ ಆಗಸ್ಟ್ 25ರಿಂದ ಉಪವಾಸ ಸತ್ಯಾಗ್ರಹದಲ್ಲಿ ತೊಡಗಿದ್ದರು.

ಅಲ್ಲದೆ 2015ರಲ್ಲಿ ನಡೆದ ಕಾನೂನು ಬಾಹಿರ ಘಟನೆಯಲ್ಲಿ ಬಂಧಿತನಾಗಿದ್ದ ಹಾರ್ದಿಕ್ ಆಪ್ತ ಅಲ್ಪೇಶ್ ಕಟಾರಿಯಾ ಅವರನ್ನು ಬಿಡುಗಡೆಗೊಳಿಸಬೇಕೆಂದು ಸಹ ಹಾರ್ದಿಕ್ ಪಟೇಲ್ ಬೇಡಿಕೆ ಇಟ್ಟಿದ್ದರು.

ಕಳೆದ 14 ದಿನಗಳಲ್ಲಿ ಸರ್ಕಾರವು ಹಾರ್ಡಿಕ್ ಜೊತೆ ಮಾತುಕತೆ ನಡೆಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಅವರ ಬೆಂಬಲಿಗರು ಆರೋಪಿಸಿದ್ದಾರೆ. ಆದರೆ ಇದೇ ವೇಳೆ ಗುಜರಾತಿನ ಇಂಧನ ಸಚಿವ ಸೌರಬ್ ಪಟೇಲ್ ಸರ್ಕಾರದೊಡನೆ ಮಾತುಕತೆ ನಡೆಸಲು ಬಯಸುವವರಿಗೆ "ಬಾಗಿಲು ತೆರೆದಿದೆ" ಎಂದು ಹೇಳಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ