ಆಪರೇಷನ್ ಕಮಲ ಮಾಡಿದರೆ ನೀವೆ ವಿಕೆಟ್ ಕಳೆದುಕೊಳ್ಳುವಿರಿ: ಬಿಜೆಪಿಗೆ ದಿನೇಶ್ ಗುಂಡೂರಾವ್

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಆಪರೇಷನ್ ಕಮಲದಂತಹ ಅನೈತಿಕ, ಪ್ರಜಾತಂತ್ರ ವಿರೋಧಿ ಕಾರ್ಯಕ್ಕೆ ಕೈಹಾಕಿದರೆ, ನಿಮ್ಮ ವಿಕೆಟ್‌ಗಳ ಪತನವಾದೀತು  ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿಗೆ ಎಚ್ಚರಿಕೆ ಮಾತು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಬೆಂಕಿಯಿಲ್ಲದೆಯೂ ಹೊಗೆ ಆಡುತ್ತಿದೆ. ಕೆಲವು ಮಾಧ್ಯಮಗಳು ಕೆಲವು ಶಾಸಕರು ಪಕ್ಷ ಬಿಡುತ್ತಿದ್ದಾರೆ, ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ಧಾರೆ. ಪಕ್ಷ ಬಿಡುವುದಾಗಿ ಯಾವೊಬ್ಬ ಕಾಂಗ್ರೆಸ್ ಶಾಸಕನೂ ಹೇಳಿಲ್ಲ ಎಂದರು.

ಶಾಸಕರಾದ ಆನಂದ್ ಸಿಂಗ್, ಅಮರೇಗೌಡ ಬಯ್ಯಾಪುರ,  ಸಿ.ಎಸ್​.ಶಿವಳ್ಳಿ, ಎಂಟಿಬಿ ನಾಗರಾಜ್, ಬಸವನಗೌಡ, ಪ್ರತಾಪ್ ಗೌಡ, ಬಿಸಿ ಪಾಟೀಲ್ ಸೇರಿದಂತೆ ಹಲವು ಶಾಸಕರೂ ನಮ್ಮೊಂದಿಗಿದ್ದಾರೆ. ಯಾರೂ ಪಕ್ಷ ಬಿಡುವ ಅಪಸ್ವರ ತೆಗೆದಿಲ್ಲ. ಪಕ್ಷವನ್ನೂ ಬಿಡುತ್ತಿಲ್ಲ ಎಂದು ಮಾಹಿತಿ ನೀಡಿದರು.

ನಮ್ಮ ಜತೆ ಬಿಜೆಪಿ 5 ಶಾಸಕರು ಬರಲು ಉತ್ಸುಕತೆ ತೋರಿದ್ದಾರೆ. ನಾವು  ಬಿಜೆಪಿ ಮಾಡಿದ ಹಾಗೆ ಮಾಡಲು ಇಷ್ಟವಿಲ್ಲ.  ಬಿಜೆಪಿಯವರು ಅಧಿಕಾರ ದಾಹದಿಂದ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಬರ, ಕೆಲವೆಡೆ ಮಳೆಯಿಂದಾದ ಅನಾಹುತ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಸೇರಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವದನ್ನು ಬಿಟ್ಟು ರಾಜಕೀಯ ಮಾಡುವುದನ್ನು ಮೊದಲು ಬಿಡಿ  ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷರು ಹೇಳಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ