ವಧು ವಾಟ್ಸ್ಯಾಪ್ ಬಳಸುತ್ತಾಳೆ ಎಂಬ ನೆವದಲ್ಲಿ ವರನಿಂದ ಮದುವೆ ರದ್ದು!

ಕರಾವಳಿ ಕರ್ನಾಟಕ ವರದಿ

ಅಮ್ರೋಹ್:
ಹುಡುಗಿ ವಾಟ್ಸ್ಯಾಪ್ ನಲ್ಲೇ ಮುಳುಗಿರುತ್ತಾಳೆ. ಆದ್ದರಿಂದ ತಮಗೆ ಈ ಮದುವೆ ಬೇಡ. ಮದುವೆ ರದ್ದು ಮಾಡಿ ಎಂದು ಉತ್ತರ ಪ್ರದೇಶದ ವರನ ಕುಟುಂಬವೊಂದು ಹೇಳಿದ ಘಟನೆ ವರದಿಯಾಗಿದೆ.

ಬುಧವಾರ ವಿವಾಹ ನಡೆಯಬೇಕಿತ್ತು. ವಧು ಮದುವೆಗೆ ಸಿದ್ದವಾಗಿದ್ದು, ವರನ ದಿಬ್ಬಣಕ್ಕಾಗಿ ಮನೆಯವರು ಮತ್ತು ಅತಿಥಿಗಳು ಕಾಯುವ ಸಂದರ್ಭ ವರನ ತಂದೆ ಪೋನ್ ಮೂಲಕ ತಮಗೆ ಮದುವೆ ಇಷ್ಟವಿಲ್ಲ ಎಂದಿದ್ದಾರೆ.

ವರ ಮತ್ತು ವರನ ತಂದೆಯ ವಿರುದ್ಧ ಐಪಿಸಿ ರ ಅನ್ವಯ ಪ್ರಕರಣ ದಾಖಲಾಗಿದೆ.

ವರನ ತಂದೆ ಎಪ್ಪತ್ತು ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದು, ವಧುವಿನ ಕಡೆಯವರಿಗೆ ಆ ಹಣ ಹೊಂದಿಸಲು ಆಗಿರಲಿಲ್ಲ. ಆದ್ದರಿಂದ ಈಗ ವಧು ವಾಟ್ಸ್ಯಾಪ್ ಬಳಸುತ್ತಾಳೆ ಎಂಬ ಕಾರಣಕ್ಕೆ ಮದುವೆ ನಿರಾಕರಿಸಿದ್ದಾರೆ ಎಂದು ವಧುವಿನ ತಂದೆ ನೌಹವಾನ್ ಸಾದತ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಅಮ್ರೋಹ್ ಎಸ್ಪಿ ವಿಪಿನ್ ಟಡಾ ಮಾಹಿತಿ ನೀಡಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ