ತೆಲಂಗಾಣದಲ್ಲಿ ಕೆಸಿಆರ್ ವಿರುದ್ಧ ಬದ್ದ ವೈರಿ ಟಿಡಿಪಿ ಮತ್ತು ಕಾಂಗ್ರೆಸ್

ಕರಾವಳಿ ಕರ್ನಾಟಕ ವರದಿ

ಹೈದರಾಬಾದ್:
ತೆಲಂಗಾಣದಲ್ಲಿ ಬಿಜೆಪಿ ಜೊತೆ ಟಿಆರ್​ಎಸ್ ಮೈತ್ರಿ ಮಾಡಿಕೊಳ್ಳಬಹುದು ಎಂಬ ಸುದ್ದಿಗಳು ಕೇಳಿಬರುತ್ತಿರುವ ಬೆನ್ನಲ್ಲೇ ಅಲ್ಲಿ ಕಾಂಗ್ರೆಸ್, ಟಿಡಿಪಿ ಮತ್ತು ಎಡಪಕ್ಷಗಳು ಟಿಆರ್​ಎಸ್ ವಿರುದ್ಧ ಒಗ್ಗೂಡಿವೆ.

ಕಾಂಗ್ರೆಸ್, ಟಿಡಿಪಿ ಮತ್ತು ಎಡಪಕ್ಷಗಳು ಈಗ ಒಟ್ಟುಗೂಡಿ ಹಂಗಾಮಿ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ವಿರುದ್ಧ ರಣತಂತ್ರ ಹೂಡುತ್ತಿವೆ. ತೆಲಂಗಾಣದ ವಿಧಾನಸಭೆ ವಿಸರ್ಜನೆಯಾದ ನಂತರ ಹಂಗಾಮಿ ಸಿಎಂ ಆಗಿರುವ ಕೆ.ಸಿ. ಚಂದ್ರಶೇಖರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಮೂರು ಪಕ್ಷಗಳು ಆರೋಪಿಸಿವೆ.

ವಿಧಾನಸಭೆ ವಿಸರ್ಜನೆಯಾದರೂ ಯೋಜನಾ ಮಂಡಳಿಯ ಸದಸ್ಯರು ಈಗಲೂ ಅಧಿಕಾರದ ಫಲ ಅನುಭವಿಸುತ್ತಿದ್ದಾರೆ.  12 ಸಲಹೆಗಾರರು ಮುಂದುವರಿದಿದ್ದಾರೆ. ಕೆಲ ಶಾಸಕರು ವಿವಿಧ ನಿಗಮಗಳಿಗೆ ಅಧ್ಯಕ್ಷರಾಗಿ ಅಧಿಕಾರ ಅನುಭವಿಸುತ್ತಿದ್ದಾರೆ. ಇಂಥ ಕೆಲವರು ಟಿಆರ್​ಎಸ್ ಪಕ್ಷದ ಟಿಕೆಟ್ ಕೂಡ ಪಡೆದಿದ್ದಾರೆ. ಇವು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಈ ಮೂರು ಪಕ್ಷಗಳು ಅಭಿಪ್ರಾಯಪಟ್ಟಿವೆ.

ಕೆ.ಸಿ. ಚಂದ್ರಶೇಖರ್ ರಾವ್ ಅವರು ತೆಲಂಗಾಣ ವಿಧಾನಸಭೆ ವಿಸರ್ಜನೆ ಮಾಡಿದ್ದಾರೆ. ಅದಾದ ಬೆನ್ನಲ್ಲೇ 105 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿ ಚುನಾವಣಾ ರಣಕಹಳೆಯನ್ನು ಎಲ್ಲರಿಗಿಂತ ಮೊದಲೇ ಮೊಳಗಿಸಿದ್ದಾರೆ. ಬಿಜೆಪಿ ಬಲಾಢ್ಯವಿರುವ ಕೆಲ ಕ್ಷೇತ್ರಗಳಿಗೆ ಟಿಆರ್​ಎಸ್ ಅಭ್ಯರ್ಥಿಗಳನ್ನ ಪ್ರಕಟಿಸಿಲ್ಲದಿರುವುದು ಗಮನಾರ್ಹ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ