ಕೆಲವು ಬಿಜೆಪಿ ಶಾಸಕರೇ ರಾಜೀನಾಮೆ ನೀಡಲಿದ್ದಾರೆ: ಸಿಎಂ ಕುಮಾರಸ್ವಾಮಿ ಬಾಂಬ್!

ಕರಾವಳಿ ಕರ್ನಾಟಕ ವರದಿ

ಮಂಡ್ಯ:
ಜಾರಕಿಹೊಳಿ ಸಹೋದರರು ಬಿಜೆಪಿಗೆ ಹೋಗುತ್ತಾರೆ ಎಂಬುದು ಸುಳ್ಳು ಸುದ್ದಿ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೆ ಅಪಾಯ ಇಲ್ಲ ಎಂದು  ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದು ಬಿಜೆಪಿಯ ನಾಲ್ಕೈದು ಶಾಸಕರೇ ರಾಜೀನಾಮೆ ನೀಡಿ ನಮ್ಮ ಬಳಗ ಸೇರಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.

ಅವರು ಇಂದು ಮಂಡ್ಯದಲ್ಲಿ ಮಾತನಾಡಿ, ಜಾರಕಿಹೊಳಿ ಸಹೋದರರು ಬಿಜೆಪಿ ಸೇರುತ್ತಾರೆ, ಅವರ ಜೊತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬುದೆಲ್ಲ ನೀವು ಮಾಧ್ಯಮದವರು ಹಬ್ಬಿಸುತ್ತಿರುವ ಸುಳ್ಳು ಸುದ್ದಿಯಷ್ಟೆ, ಹೀಗೆ ಸುಳ್ಳು ಸುದ್ದಿ ಹಬ್ಬಿಸುವುದರಿಂದ ನಿಮಗೆ ಏನು ಸಿಗುತ್ತದೆ ಎಂದು ಸಿಎಂ ಗರಂ ಆಗಿ ಕೇಳಿದರು.

ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದಿಲ್ಲ, ಬೇಕಾದರೆ ಬಿಜೆಪಿ ಶಾಸಕರೇ ಯೂ ಟರ್ನ್ ಹೊಡೆಯಲಿದ್ದಾರೆ. ಬಿಜೆಪಿಯ ನಾಲ್ಕೈದು ಶಾಸಕರಿಂದ ರಾಜೀನಾಮೆ ಕೊಡಿಸೋಣ, ಕಾಯುತ್ತಿರಿ ಎಂದರು.

ಜಾರಕಿಹೊಳಿ ಬ್ರದರ್ಸ್ ಬಗ್ಗೆ ಯಾವುದೇ ಗೊಂದಲವಿಲ್ಲ, ಬಿಜೆಪಿಗೆ ಹೋಗುವ ಬಗ್ಗೆ ಅವರು ವಿಚಾರ ಮಾಡಿಲ್ಲ ಎಂದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ