ಸೌದಿ: ಸಾಮಾಜಿಕ ಮಾಧ್ಯಮದಲ್ಲಿ ಟೀಕೆ- 5 ವರ್ಷ ಜೈಲು ಖಚಿತ

ಕರಾವಳಿ ಕರ್ನಾಟಕ ವರದಿ

ರಿಯಾದ್
: ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳು, ಸಾರ್ವಜನಿಕ ನೈತಿಕತೆಯನ್ನು ಪ್ರಶ್ನಿಸುವ, ವ್ಯಂಗ್ಯ ಮಾಡುವ ಮತ್ತು ಅವುಗಳನ್ನು ಅಪಹಾಸ್ಯ ಮಾಡುವ ಸಂದೇಶಗಳನ್ನು, ಬರಹಗಳನ್ನು ಸಾಮಾಜಿಕ ಮಾಧ್ಯಮ- ಆನ್ ಲೈನ್ ಮೂಲಕ ಹರಡಿದಲ್ಲಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು.

ಆನ್ ಲೈನ್ ಮೂಲಕ ವ್ಯಂಗ್ಯ ಹರಡುವುದನ್ನು ಸೈಬರ್ ಅಪರಾಧ ಎಂದು ಪರಿಗಣಿಸಲಾಗುವುದು ಮತ್ತು ಗರಿಷ್ಠ ಐದು ವರ್ಷ ಜೈಲು ಮತ್ತು ಮುವತ್ತು ಲಕ್ಷ ರಿಯಲ್ ದಂಡ($800,000)ವಿಧಿಸಲಾಗುತ್ತದೆ ಎಂದು ಸೌದಿ ಅರೇಬಿಯಾದ ಪಬ್ಲಿಕ್ ಪ್ರಾಸಿಕ್ಯೂಟರ್ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಸೌದಿ ಅರೇಬಿಯಾದ ಯುವರಾಜ ಮೊಹ್ಮದ್ ಬಿನ್ ಸಲ್ಮಾನ್ ರಾಜಕೀಯ ಭಿನ್ನಮತ ಮತ್ತು ಮಾನವ ಹಕ್ಕು ಹೋರಾಟವನ್ನು ದಮನಿಸುತ್ತಿದ್ದಾರೆ ಎಂಬ ಟೀಕೆಗಳಿಗೆ ಈ ಹೊಸ ಕ್ರಮ ಪುಷ್ಠಿ ನೀಡಿದೆ.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೌದಿ ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರಹಗಳನ್ನು ಪ್ರಕಟಿಸುವ ತಮ್ಮ ಪರಿಚಿತರ ಬಗ್ಗೆ, ಸಾಮಾಜಿಕ ಕಾರ್ಯಕರ್ತರ ಬಗ್ಗೆ , ‘ಭಯೋತ್ಪಾದಕ ಚಟುವಟಿಕೆ’ಗಳ ನೆಲೆಯಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದು, ಸಾವಿರಾರು ಮಂದಿ ಇದರಿಂದ ಬಂಧನಕ್ಕೊಳಗಾಗಿದ್ದರು. ಟ್ವಿಟರ್ ಬಳಕೆದಾರರನ್ನು ಈ ವಿಷಯದಲ್ಲಿ ಗುರಿಯಾಗಿರಿಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯ ದಮನಕ್ಕೆ ಯತ್ನಿಸಲಾಗಿದೆ ಎಂದು ಜಾಗತಿಕ ಮಟ್ಟದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದನ್ನು ಸ್ಮರಿಸಬಹುದು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ