ಪ್ರಿಯಕರನೊಡನೆ ವಧು ಪರಾರಿ: ಶಾಸಕನ ಮದುವೆ ರದ್ದು!

ಕರಾವಳಿ ಕರ್ನಾಟಕ ವರದಿ

ಈರೋಡ್:
ಮದುವೆಯಾಗಬೇಕಾಗಿದ್ದ ವಧು ನಾಪತ್ತೆಯಾದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಶಾಸಕರ ವಿವಾಹ ರದ್ದಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಭವಾನಿಸಾಗರದ ಎಐಡಿಎಂಕೆ ಶಾಸಕ ಈಶ್ವರನ್ (43),ವಿವಾಹ ರದ್ದಾಗಿದೆ. ಸೆಪ್ಟೆಂಬರ್ 12ರಂದು ಎಂಸಿಎ ಪದವೀಧರೆ ಆರ್. ಸಂದ್ಯಾ (23) ಜತೆಗೆ ಮದುವೆ ನಿಶ್ಚಯವಾಗಿದ್ದು ಪ್ರಸಿದ್ದ ಬನ್ನಾರಿ ಅಮ್ಮನ್ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮವಿತ್ತು.

ಆದರೆ ವಧು ಸಂದ್ಯಾ ಬೇರೊಬ್ಬನನ್ನು ಪ್ರಿತಿಸುತ್ತಿದ್ದಳೆನ್ನಲಾಗಿದ್ದು ಆಕೆ ತನ್ನ ಪ್ರಿಯಕರನೊಡನೆ ಶನಿವಾರ (ಸೆಪ್ಟೆಂಬರ್ 1) ಮನೆಯಿಂದ ಪಲಾಯನ ಮಾಡಿದ್ದಾಳೆ.

ಶನಿವಾರ ಮಧ್ಯಾಹ್ನ  ಸತ್ಯಮಂಗಲಂನಲ್ಲಿರುವ ಸಹೋದರಿ ಮನೆಗೆ ಹೋಗುತ್ತೇನೆಂದು ಹೇಳಿ ಹೊಗಿದ್ದ ಸಂದ್ಯಾ ಮತ್ತೆ ಹಿಂತಿರುಗಲಿಲ್ಲ.ಮಗಳ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಇದರಿಂದ ಆತಂಕಗೊಂಡ ಪೋಷಕರು ಕಡತೂರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ವಿಘ್ನೇಶ್  ಎನ್ನುವವನನ್ನು ಸಂದ್ಯಾ ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು ಆತನೊಡನೆ ಓಡಿ ಹೋಗಿರುವ ಸಾಧ್ಯತೆ ಇದೆ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ ಸೆಲ್ವಂ, ಸಭಾಪತಿ ಪಿ ಧನಪಾಲ್  ಸೇರಿ ಅನೇಕ ಗಣ್ಯರ ಸಮ್ಮುಖದಲ್ಲಿ ನೆರವೇರಬೇಕಾಗಿದ್ದ ಶಾಸಕರ ವಿವಾಹ ರದ್ದಾಗಿರುವ ಕಾರಣ ಶಾಸಕ ಈಶ್ವರನ್ ತೀವ್ರ ಮುಜುಗರಕ್ಕೀಡಾಗಿದ್ದಾರೆ.

 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ