ಕರಾವಳಿ ಕರ್ನಾಟಕ ವರದಿಮಂಗಳೂರು: ನಗರದ ಪಿವಿಎಸ್ ಸಮಿಪ ಪಿ.ಕೆ.ಹೆಲ್ತ್ ಕ್ಯೂರ್ ಮೆಡಿಕಲ್ ಶಾಪ್ ನಲ್ಲಿ ವೈದ್ಯರ ಚೀಟಿ ಇಲ್ಲದೇ ಮತ್ತು ಬರಿಸುವ ಔಷಧ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಔಷಧ ನಿಯಂತ್ರಣ ಇಲಾಖೆಯು(DCD) ಸಂಸ್ಥೆಯ ಪರವಾನಿಗೆ ರದ್ದುಗೊಳಿಸಿ ಆದೇಶ ನೀಡಿದೆ.ಜು.18ರಂದು ಖಚಿತ ಮಾಹಿತಿಯಂತೆ ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಉರ್ವ ಪೊಲೀಸ್ ನಿರೀಕ್ಷಕರು ಮತ್ತು ಮಂಗಳೂರು ಪೂರ್ವ ಠಾಣೆ ಪೊಲೀಸ್ ನಿರೀಕ್ಷಕರು ಮತ್ತು ಸಿಬಂದಿ ದಾಳಿ ನಡೆಸಿ ನಿಷೇಧಿತ ಔಷಧ ‘ಸ್ಟಾಸ್ಮೊ ಪ್ರೊಕ್ಸಿವೊನ್ ಪ್ಲಸ್’ ಗುಳಿಗೆಗಳನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಮೆಡಿಕಲ್ ಶಾಪ್ ವಿರುದ್ಧ ಔಷಧ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು.ಪಿ.ಕೆ,ಕ್ಯೂರ್ ಮೆಡಿಕಲ್ ಶಾಪ್ ನವರು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940 ಮತ್ತು ನಿಯಮಾವಳಿಗಳು 1945ರಡಿ ನಿಯಮ 65 ‘ಎ’ಯಲ್ಲಿನ ಉಪನಿಯಮ ಉಲ್ಲಂಘಿಸಿ ವ್ಯಾಪಾರದಲ್ಲಿ ತೊಡಗಿದ್ದು ದೃಢಪಟ್ಟ ಕಾರಣ ಸಂಸ್ಥೆಯ ಪರವಾನಿಗೆ ರದ್ದುಗೊಳಿಸಿ ಆ.31ರಂದು ಆದೇಶ ನೀಡಲಾಗಿದೆ
5 ಗ್ರಾ.ಪಂ.ಗಳನ್ನು ಸೇರಿಸಿ ಗ್ರೇಟರ್ ಉಡುಪಿ!