ಬೆಳ್ತಂಗಡಿ: ಯಾಕೂಬ್ ಅವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಯೂಟ್ಯೂಬ್ ನಲ್ಲಿ ಇವರ ಬೋಧನೆಯ ಸುಮಾರು 150ಕ್ಕೂ ಅಧಿಕ ವಿಡಿಯೋಗಳಿದ್ದು, ಮಾನವ ಸಂಪನ್ಮೂಲ ಇಲಾಖೆ ದೀಕ್ಷಾ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುತ್ತಿದೆ.

ಕರಾವಳಿ ಕರ್ನಾಟಕ ವರದಿ

ಬೆಳ್ತಂಗಡಿ:
ತಾಲೂಕು ನಡ ಸರಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರು ಅವರು 2018ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಳೆದ 23 ವರ್ಷಗಳಿಂದ ನಡ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯದಲ್ಲಿ 5 ವರ್ಷಗಳ ಕಾಲ ಅಕ್ಷರ ದಾಸೋಹದ ಸಹಾಯಕ ನಿದರ್ೇಶಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಇಡೀ ರಾಜ್ಯಕ್ಕೆ ಮಾದರಿಯಾದ ಗಣಿತ ಪ್ರಯೋಗಾಲಯವನ್ನು ನಡ ಶಾಲೆಯಲ್ಲಿ ಸ್ಥಾಪಿಸಿ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ಯೂಟ್ಯೂಬ್ನಲ್ಲಿ ಇವರ ಬೋಧನೆಯ ಸುಮಾರು 150ಕ್ಕೂ ಅಧಿಕ ವಿಡಿಯೋಗಳಿದ್ದು, ಪ್ರಸ್ತುತ ಅದನ್ನು ಮಾನವ ಸಂಪನ್ಮೂಲ ಇಲಾಖೆ ತನ್ನ ದೀಕ್ಷಾ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡುತ್ತಿದೆ. 9 ಹಾಗೂ 10ನೇ ತರಗತಿಗಳಿಗೆ ಸಂಬಂಧಿಸಿ, 4000ಕ್ಕೂ ಅಕ ಪುಟ ನೋಟ್ಸ್ಗಳನ್ನು ಇವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಪ್ರಸ್ತುತ ಅದನ್ನು ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಇವರು ದ.ಕ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಶ್ರೀನಿವಾಸ ಶಿಕ್ಷಣ ಸಂಸ್ಥೆಯಿಂದ ಅವಿಭಜಿತ ದ.ಕ.ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಯೆನೆಪೋಯ ಶಿಕ್ಷಣ ಸಂಸ್ಥೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ