ದೋಸ್ತಿ ಸರ್ಕಾರ ಉರುಳಿದರೆ ಅದಕ್ಕೆ ಸಿಎಂ ಅಣ್ಣ ರೇವಣ್ಣನೇ ಕಾರಣ: ಎ.ಮಂಜು

ಕರಾವಳಿ ಕರ್ನಾಟಕ ವರದಿ

ಹಾಸನ
: ಒಂದು ವೇಳೆ ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿದರೆ ಅದಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಅಣ್ಣ, ಸಚಿವ ಎಚ್ ಡಿ ರೇವಣ್ಣ ಅವರೇ ಕಾರಣ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎ.ಮಂಜು ಅವರು ಸೋಮವಾರ ಹೇಳಿದ್ದಾರೆ.

ಇಂದು ಸಕಲೇಶಪುರದ ಬಿಸಿಲೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಂಜು ಅವರು, ಕಾಂಗ್ರೆಸ್ ಬಲಹೀನವಾಗಲು ಜೆಡಿಎಸ್ ದ್ವೇಷ ರಾಜಕಾರಣವೇ ಕಾರಣ. ಒಂದು ವೇಳೆ ಸರ್ಕಾರ ಉರುಳಿದರೆ ಸಿಎಂ(ಎಚ್ ಡಿಕೆ) ಅಣ್ಣನೇ(ಎಚ್ ಡಿ ರೇವಣ್ಣ) ಕಾರಣ ಎಂದು ವಾಗ್ದಾಳಿ ನಡೆಸಿದರು.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲಹೀನವಾಗುತ್ತಿದೆ. ಅದಕ್ಕೆ ಜೆಡಿಎಸ್ ದ್ವೇಷದ ರಾಜಕಾರಣವೇ ಕಾರಣ. ಸಿಎಂ ಕುಮಾರಸ್ವಾಮಿಯವರಿಗೆ ಬಹಿರಂಗ ಎಚ್ಚರಿಕೆ ಕೊಡುತ್ತಿದ್ದೇನೆ, ನಾವು ಇನ್ನೂ ದ್ವೇಷದ ರಾಜಕಾರಣ ಸಹಿಸಲು ಸಾಧ್ಯವಿಲ್ಲ ಎಂದರು.

ಹಾಸನ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ. ಹೀಗಾದರೆ ಕಾಂಗ್ರೆಸ್ ಕಾರ್ಯಕರ್ತರ ಗತಿಯೇನು ಎಂದು ಮಾಜಿ ಸಚಿವರು ಪ್ರಶ್ನಿಸಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ