ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಾಡೇಕರ್ ನಿಧನ

ಕರಾವಳಿ ಕರ್ನಾಟಕ ವರದಿ

ಮುಂಬೈ
: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ (77) ಅವರು ಮುಂಬೈನ ಜಸ್ಲೋಕ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು.

1941, ಎ.1ರಂದು ಮುಂಬೈಯಲ್ಲಿ  ಜನಿಸಿದ್ದ ಅಜಿತ್ ಲಕ್ಷ್ಮಣ್ ವಾಡೇಕರ್ ಅವರು  1971 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಜಯಗಳಿಸಿದ್ದ ಭಾರತ ತಂಡದ ನಾಯಕರಾಗಿದ್ದರು.  ವಾಡೇಕರ್ ಭಾರತವನ್ನು 37 ಟೆಸ್ಟ್ ಮತ್ತು ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. 1974ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಇವರ ಕಡೆಯ ಪಂದ್ಯವಾಗಿತ್ತು. 237 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದರು.

1966 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯದ ಮೂಲಕ ವಾಡೇಕರ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಕ್ರಮಾಂಕದ ಶ್ರೇಷ್ಠ ದಾಂಡಿಗರಾಗಿದ್ದ ವಾಡೇಕರ್ ಅವರು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮುವತ್ತಾರು ಶತಕ, 15,380ರನ್, ಟೆಸ್ಟ್ ನಲ್ಲಿ  2113ರನ್, ಒಂದು ಶತಕ, ಹದಿನಾಲ್ಕು ಅರ್ಧ ಶತಕ, ಏಕದಿನ ಕ್ರಿಕೆಟ್ ನಲ್ಲಿ ಎಪ್ಪತ್ಮೂರು ರನ್ ಗಳಿಸಿದ್ದರು.

 ಅಜಿತ್ ವಾಡೇಕರ್  ಅವರು ನಿವೃತ್ತಿ ಬಳಿಕ ಮ್ಯಾನೇಜರ್, ಕೋಚ್, ಆಯ್ಕೆ ಸಮಿತಿ ಅಧ್ಯಕ್ಷರಾಗಿ ಸೇವೆ ನೀಡಿದ್ದರು. ವಾಡೇಕರ್ ಅವರ ಪ್ರತಿಭೆಯನ್ನು ಗೌರವಿಸಿ ಭಾರತ ಸರ್ಕಾರ ಅವರಿಗೆ  1972 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅರ್ಜುನ ಪ್ರಶಸ್ತಿ. ಸಿಕೆ ನಾಯ್ಡು ಜೀವನಶ್ರೇಷ್ಠ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ