ಎ.ಎಂ.ಆರೀಫ್ ಜೋಕಟ್ಟೆ/ಕರಾವಳಿಕರ್ನಾಟಕ ವರದಿದಮ್ಮಾಮ್ : ಇಂಡಿಯಾ ಫ್ರಾಟರ್ನಿಟಿ ಫೋರಂಎಂದಿನಂತೆ ಈ ವರುಷವೂ 1200 ಸ್ವಯಂ ಸೇವಕರನ್ನು ಅಲ್ಲಾಹನ ಅಥಿತಿಗಳಾದ ಹಜ್ಜಾಜ್ ಗಳ ಸೇವೆಗೈಯಲು ಅಣಿಯಾಗಿಸಿದ್ದು , ಇದರ ಭಾಗವಾಗಿ ದಮ್ಮಾಮ್ ಪ್ರಾಂತ್ಯದಿಂದ ನುರಿತ ಹಾಗೂ ಎಲ್ಲ ಭಾಷಾ ಪರಿಣತರಾಗಿರುವ ಸುಮಾರು 200 ಸ್ವಯಂ ಸೇವಕರು ಹಜ್ಜ್ ಯಾತ್ರಾರ್ಥಿಗಳ ಸೇವೆಗೈಯಲು ಸಜ್ಜಾಗಿದ್ದಾರೆ. ಐ ಎಫ್ ಎಫ್ ದಮ್ಮಾಮ್ ಪ್ರಾಂತ್ಯ ಅಧ್ಯಕ್ಷ ಇಮ್ತಿಯಾಝ್ ಸ್ವಯಂ ಸೇವಕರ ಹಜ್ಜ್ ಸೇವೆಯ ತರಬೇತಿ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು. ಬದ್ರ್ ಅಲ್ ರಾಬಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಸ್ವಯಂ ಸೇವಕರಿಗೆ ಪರಿಪೂರ್ಣವಾದ ಮಾಹಿತಿಯನ್ನು ಮುದಸ್ಸರ್ ಜಿದ್ದಾ ನೀಡಿದರು. ಅರಫಾ ಕರ್ಮಗಳನ್ನು ಪೂರ್ತೀಕರಿಸಿ ಮೀನಾ ಕಡೆ ಬರುವ ಹಾಜ್ ಗಳಿಗೆ ಸಹಕಾರಿಯಾಗುವ ಬಗ್ಗೆ ತರಬೇತಿ ನೀಡಿ, ಸ್ವಯಂಸೇವಕರು ಪಾಲಿಸಬೇಕಾದ ಶಿಸ್ತಿನ ಬಗ್ಗೆಯೂ ಸ್ಥೂಲವಾಗಿ ವಿವರಿಸಿದರು.ಈ ಸಂದರ್ಭದಲ್ಲಿ ಮೂಸಾ ಕುಟ್ಟಿ ಕೇರಳ, ಫೈಸಲ್ ತಮಿಳುನಾಡು, ಅಥಾವುಲ್ಲಾ ಕರ್ನಾಟಕ ಹಾಗೂ ಉತ್ತರ ಭಾರತದ ನಝ್ರುಲ್ ಇಸ್ಲಾಂ ಚೌಧರಿ ಅಸ್ಸಾಂ ಉಪಸ್ಥಿದರಿದ್ದರು.
5 ಗ್ರಾ.ಪಂ.ಗಳನ್ನು ಸೇರಿಸಿ ಗ್ರೇಟರ್ ಉಡುಪಿ!