ಹಮಸ್ ವಿರುದ್ಧ ಇಸ್ರೇಲ್ ಕ್ಷಿಪಣಿ ದಾಳಿಗೆ ಗರ್ಭಿಣಿ ಮಹಿಳೆ, ಮಗು ಬಲಿ

ಕರಾವಳಿ ಕರ್ನಾಟಕ ವರದಿ

ಇಸ್ರೇಲ್:
ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಗರ್ಭಿಣಿ ಮಹಿಳೆ ಮತ್ತು ಆಕೆಯ ಹದಿನೆಂಟು ತಿಂಗಳ ಎಳೆಯ ಮಗು ಸೇರಿ ಮೂವರು ಪ್ಯಾಲೇಸ್ತೀನಿಯರು ಸಾವಪ್ಪಿದ ಘಟನೆ ವರದಿಯಾಗಿದೆ.
ಇಸ್ರೇಲ್ ತನ್ನ ಆರು ನಾಗರಿಕರು ಕರಾವಳಿ ತೀರದ ರಾಕೆಟ್ ದಾಳಿಗೆ ಸಾವಪ್ಪಿದ ಬೆನ್ನಿಗೆ 140ಕ್ಕೂ ಅಧಿಕ ದಾಳಿಗಳನ್ನು ನಡೆಸಿದೆ.

ಮುಂದೆ ಆಗುವ ಎಲ್ಲ ಅನಾಹುತಕ್ಕೆ ಹಮಸ್ ಸಂಘಟನೆ ಹೊಣೆಯಾಗುತ್ತದೆ ಎಂದು ಇಸ್ರೇಲ್ ಸೇನೆ ಸಂಘರ್ಷ ನಿಲ್ಲದಿದ್ದರೆ ದಾಳಿಗಳು ಮುಂದುವರಿಯುವ ಬಗ್ಗೆ ಕಟು ಎಚ್ಚರಿಕೆ ನೀಡಿದೆ. ಗಾಜಾಪಟ್ಟಿಯಲ್ಲಿನ ನಾಗರಿಕರನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಹಮಸ್ ಸಂಘಟನೆ ತನ್ನ ಕೃತ್ಯಕ್ಕೆ ಈ ಹಿಂದೆ ಬೆಲೆ ತೆತ್ತಂತೆ ಮುಂದೆ ಕೂಡ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಸೇನೆಯ ಅಧಿಕಾರಿಯೋರ್ವರು ಸೇನೆಯ ಅಧಿಕೃತ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಹಮಸ್ ಕೇಂದ್ರೀಕರಿಸಿಕೊಂಡು ಇಸ್ರೇಲ್ ಭಾರೀ ಯುದ್ಧ ಮಾದರಿಯ ಕಾರ್ಯಾಚರಣೆಗೆ ಸಿದ್ದವಾಗಿದೆ.

ಪ್ರಧಾನಿ ಬೆಂಝಮಿನ್ ನೇತನ್ಯಾಹು ಅವರ ಸಚಿವ ಸಂಪುಟ ಸದಸ್ಯ ಯುವೆಲ್ ಸ್ಟಿಂಝ್ ಅವರು ನಾವು ಗಡಿ ಸಂಘರ್ಷ ಅಥವಾ ಯುದ್ಧಕ್ಕೆ ಉತ್ಸುಕರಾಗಿಲ್ಲ. ಆದರೆ ನಾವು ಈ ವಿಷಯದಲ್ಲಿ ಹಮಸ್ ಕೃತ್ಯಗಳಿಗೆ ಯಾವುದೇ ರಿಯಾಯಿತಿ ತೋರಿಸದೇ ಇರುವುದರಿಂದ ಯುದ್ದದಂಥ ಪರಿಸ್ಥಿತಿ ಖಂಡಿತಾ ಎದುರಾಗುತ್ತದೆ ಎಂದು ಇಸ್ರೇಲಿ ರೇಡಿಯೊದಲ್ಲಿ ಮಾತನಾಡಿದ್ದಾರೆ.

ಗಾಝಾ ಪರಿಸ್ಥಿತಿ ಬಗ್ಗೆ ಚರ್ಚಿಸಲು 13:00 GMT ಭದ್ರತಾ ಸಂಪುಟ ಸದಸ್ಯರ ಚರ್ಚೆ ನಡೆಯಲಿದೆ.
ಹಮಸ್ ವಕ್ತಾರ ಅಬ್ದುಲತೀಫ್ ಅಲ್-ಕಾನೊ ಇಸ್ರೇಲ್ ದಾಳಿಗೆ ವಿರುದ್ಧ ಪ್ಯಾಲೇಸ್ತೀನಿಯರು ಆತ್ಮರಕ್ಷಣಾ ಪ್ರತಿದಾಳಿಗೆ ಸಿದ್ದರಾಗಿದ್ದು, ನಮ್ಮ ಜನರನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದ್ದು, ಇಸ್ರೇಲ್ ದಾಳಿಗೆ ತಕ್ಕ ಉತ್ತರ ನೀಡಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ಯಾಲೇಸ್ತೀನ್ ಸುದ್ದಿ ಸಂಸ್ಥೆ WAFA ಇಸ್ರೇಲ್ ದಾಳಿಯಿಂದ ಹಮಸ್ ಸದಸ್ಯ ಸೇರಿದಂತೆ ಹನ್ನೆರಡು ಪ್ಯಾಲೇಸ್ತೀನ್ ನಾಗರಿಕರು ಹತರಾಗಿದ್ದಾರೆ ಎಂದು ವರದಿಮಾಡಿದೆ.

ಶಾಂತಿಮಾತುಕತೆಗಳು ಪ್ರಗತಿಯಲ್ಲಿ ಇರುವ ಸಂದರ್ಭದಲ್ಲೇ ಎರಡೂ ಕಡೆಯಿಂದ ಭಾರೀ ದಾಳಿಗಳು ನಡೆಯುತ್ತಿರುವುದು ಕಳವಳಕಾರಿ ವಿದ್ಯಮಾನವಾಗಿದೆ. ಗಾಜಾದಿಂದ ಹಾರಿಸಲ್ಪಟ್ಟ 150ಕ್ಕೂ ಅಧಿಕ ರಾಕೆಟ್ ಗಳಲ್ಲಿ 25 ರಾಕೆಟ್ ಗಳನ್ನು ಬೇಧಿಸಲಾಗಿದೆ ಎಂದು ಇಸ್ರೇಲ್ ಸೇನೆಯ ಹೇಳಿಕೆ ತಿಳಿಸಿದೆ. ಈ ದಾಳಿಗಳ ಹೊಣೆಯನ್ನು ಹಮಸ್ ತನ್ನ ಕೃತ್ಯ ಎಂದು ಒಪ್ಪಿದ್ದು, ನಾವು ಶತ್ರುಗಳ ನೆಲೆಯ ಮೇಲೆ ಬಾರೀ ದಾಳಿ ಎಸಗಿದ್ದೇವೆ ಎಂದು ಹೇಳಿಕೊಂಡಿದೆ.

ಗಾಜಾ ಪಟ್ಟಿಯ ಇಸ್ರೇಲಿ ನಾಗರಿಕರು ವಾಸಿಸುವ ಸ್ಥಳಗಳಲ್ಲಿ ನಾಗರಿಕರು ತಕ್ಷಣ ಓಡಿ ಜೀವ ಉಳಿಸಿಕೊಳ್ಳುವಂತೆ ಎಚ್ಚರಿಸುವ ಸೈರನ್ ಗಳು ಮೊಳಗುತ್ತಿವೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ