ಉಳ್ಳಾಲ : ಹೈಟೆನ್ಶ್ಹನ್ ತಂತಿ ಸ್ಪರ್ಶಿಸಿದ ಯುವಕ ಸಾವು

ಕರಾವಳಿ ಕರ್ನಾಟಕ ವರದಿ

ಮಂಗಳೂರು
:  ಉಳ್ಳಾಲ ದರ್ಗಾ ಕಾಲೇಜು ಕಟ್ಟಡ ಕಾಮಗಾರಿ ಸಂದರ್ಭ ತಗಡಿನ ಶೀಟ್ ತೆಗೆಯುವಾಗ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಯುವಕ ಸಾವಪ್ಪಿದ ಕಳವಳಕಾರಿ ಘಟನೆ ಸೋಮವಾರ ವರದಿಯಾಗಿದೆ.

ಮೃತರನ್ನು ಕೊಣಾಜೆ ಅಡ್ಕರೆಪಡ್ಪು ನಿವಾಸಿ ಬಶೀರ್ ಅವರ ಮಗ ಯುಸೂಫ್(25) ಎಂದು ಗುರುತಿಸಲಾಗಿದೆ. 

ಕಬ್ಬಿಣದ ರ್ಯಾಕ್ ನಲ್ಲಿ ನಿಂತು ತಗಡು ಎತ್ತಿದ ಸಂದರ್ಭ ದರ್ಗಾ ಆವರಣದ ಹೊರಗಿದ್ದ ಟ್ರಾನ್ಸ್ಫಾರ್ಮರ್ ಹೈಟೆನ್ಶನ್ ತಂತಿ ತಗಡಿಗೆ ತಾಗಿದ್ದರಿಂದ ಭಾರೀ ವಿದ್ಯುತ್ ಆಘಾತದಿಂದ ಯುಸೂಫ್ ಅವರು ಸ್ಥಳದಲ್ಲೇ ಸಾವಪ್ಪಿದರು.

ಉಳ್ಳಾಲ ದ್ಅರ್ಗಾ ಆವರಣದಲ್ಲಿನ ಖಾಝಿ ಭವನದ ಪಕ್ಕದ ಅರೇಬಿಕ್ ಕಾಲೇಜಿನ ಕಟ್ಟಡ ನವೀಕರಣ ಕಾಮಗಾರಿಯಲ್ಲಿ ಯುಸೂಫ್ ಅವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ತಗಡಿನ ಶೀಟ್ ತೆಗೆಯಲು ಸಹಾಯ ಮಾಡುವಾಗ ಸಾವಪ್ಪಿದ್ದು, ಪರಿಸರ ವಾಸಿಗಳಿಗಳನ್ನು ಶೋಕದ ಕಡಲಲ್ಲಿ ಮುಳುಗಿಸಿದೆ.
ಉಳ್ಳಾಲ ಪೊಲೀಸರ್ಉ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ