ಸಿಸಿ ಕ್ಯಾಮರಾ ವಿಚಾರದಲ್ಲಿ ಕಾಂಗ್ರೆಸ್ ಮುಖಂಡನಿಗೆ ಹಲ್ಲೆ: ಅಮೃತ್ ಶೆಣೈ ಖಂಡನೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಮನೆಯ ಬಳಿ ನಿಂತಿದ್ದ ಕಾಂಗ್ರೆಸ್ ಮುಖಂಡನನ್ನು ಮನೆಯಿಂದ ಹೊರಗೆಳೆದು ಪಿವಿಸಿ ಪೈಪ್ ನಿಂದ ಮಾರಕ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದ್ದು, ಹಲ್ಲೆಯನ್ನು ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಖಂಡಿಸಿದ್ದಾರೆ.

ಕಾಂಗ್ರೆಸ್ ಮುಂದಾಳು, ಬಡಾನಿಡಿಯೂರು ಗ್ರಾಮದ ಪಾವಂಜೆಯ ಸುನಿಲ್ ಡಿ’ಸೋಜಾ(32)  ಅವರ ಬೆನ್ನಿಗೆ ಮತ್ತು ದೇಹದ ಇತರ ಭಾಗಗಳಿಗೆ ಹಲ್ಲೆಯಿಂದ ತೀವೃ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸುನಿಲ್ ಅವರ ಆರೋಗ್ಯವನ್ನು ಆಸ್ಪತ್ರೆಗೆ ಭೇಟಿ ನೀಡಿ ಅಮೃತ್ ಶೆಣೈ ವಿಚಾರಿಸಿದರು. ಪ್ರಕರಣದ ಸೂಕ್ತ ತನಿಖೆಗೆ ಅಮೃತ್ ಶೆಣೈ ಆಗ್ರಹಿಸಿದ್ದು, ಹಲ್ಲೆಯಿಂದ ಎದೆಗುಂದದಂತೆ ಗಾಯಾಳು ಸುನೀಲ್ ಅವರಿಗೆ ಸಾಂತ್ವನ ಹೇಳಿದ್ದಾರೆ.

ಮನೆಯಿಂದ ಕುತ್ತಿಗೆಗೆ ಕೈಹಾಕಿ ಹೊರಗೆಳೆದು ತಂದು ಸುನಿಲ್ ಡಿ’ಸೋಜಾ ಅವರು ಕಳೆದ ವಿದಾನಸಭಾ ಚುನಾವಣೆ ಸಂದರ್ಭ ಸುರಕ್ಷತಾ ದೃಷ್ಠಿಯಿಂದ  ರಸ್ತೆ ಬದಿ ಅಳವಡಿಸಲಾದ ಸಿಸಿ ಕ್ಯಾಮರಾ ತೆಗೆಯಲು ಹೇಳಿದಾಗ ಕಾಂಗ್ರೆಸ್ ಮುಖಂಡ ಸುನಿಲ್ ಕುಮಾರ್ ನಿರಾಕರಿಸಿದ ಸಂದರ್ಭ ಅವರಿಗೆ ಹಲ್ಲೆಗೈಯಲಾಗಿತ್ತು. ಆರೋಪಿಗಳಾದ ಪಾವಂಜೆಗುಡ್ಡೆಯ ಸಂದೀಪ್ ಮತ್ತು ಇನ್ನೊಬ್ಬ ಸಂದೀಪ್ ಎಂಬವರು ಕಾರಿನಲ್ಲಿ ಬಂದು ಈ ಹಲ್ಲೆಗೈದಿದ್ದಾರೆ ಎಂದು ಆರೋಪಿಸಿ ಮಲ್ಪೆ ಪೊಲೀಸರಿಗೆ ದೂರು ನೀಡಲಾಗಿದೆ.

ಹಲ್ಲೆಗೈದ ಸಂದರ್ಭ ಸುನಿಲ್ ಡಿಸೋಜಾ ಅವರ ಕುತ್ತಿಗೆಯಲ್ಲಿದ್ದ  ಎಪ್ಪತ್ತೈದು ಸಾವಿರ ರೂ. ಮೌಲ್ಯದ ಮೂರುವರೆ ಪವನ್ ಚಿನ್ನದ ಸರ ತುಂಡಾಗಿ ನಾಪತ್ತೆಯಾದ ಬಗ್ಗೆಯೂ ಮಲ್ಪೆ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಲ್ಲೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಸಂಘಟನೆಯೊಂದರ ಯುವಕರು ಸುನಿಲ್ ಅವರ ಮನೆ ಹೊರಗಡೆ ತಡರಾತ್ರಿ ತನಕ ಮದ್ಯ ಸೇವನೆ ಮತ್ತಿತರ ಚಟುವಟಿಕೆಗಳಲ್ಲಿ ನಿರತರಾಗಿರುವುದನ್ನು ಸುನಿಲ್ ಅವರು ಈ ಹಿಂದೆ ಆಕ್ಷೇಪಿಸಿದ್ದರು ಎನ್ನಲಾಗಿದೆ. ಸಿಸಿ ಕ್ಯಾಮರಾ ತೆಗೆಯುವಂತೆ ಸಂಘಟನೆ ಸದಸ್ಯರು ಮಾಡಿದ ತಾಕೀತಿಗೆ ಸುನೀಲ್ ಅವರು ಒಪ್ಪದೇ ತನ್ನ ಸುರಕ್ಷತೆ ದೃಷ್ಠಿಯಿಂದ ಸಿಸಿ ಕ್ಯಾಮರಾ ಅಳವಡಿಸುವುದು ಅಗತ್ಯ ಎಂಬ ನಿಲುವು ಹೊಂದಿದ್ದು, ಅವರ ವಿರೋಧಿಗಳ ಕೆಂಗಣ್ಣಿಗೆ ಕಾರಣವಾಗಿತ್ತು.

ಬಿಜೆಪಿ ಮುಖಂಡ ಉಮೇಶ್ ಪೂಜಾರಿಯವರ ಚಿತಾವಣೆಯಿಂದ ಸಂದೀಪ್ ಎಂಬ ಹೆಸರಿನ ಇಬ್ಬರು ಯುವಕರು ಸುನಿಲ್ ಅವರ ಮೇಲೆ ಮಾರಕ ಹಲ್ಲೆಗೈದಿದ್ದಾರೆ ಎನ್ನಲಾಗುತ್ತಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ