ಉಪ್ಪಳ ಸಿಪಿಐ(ಎಂ) ಕಾರ್ಯಕರ್ತನ ಕೊಲೆ: ಇಬ್ಬರ ಸೆರೆ

ಕರಾವಳಿ ಕರ್ನಾಟಕ ವರದಿ

ಕಾಸರಗೋಡು
: ಸಿಪಿಐ(ಎಂ) ಕಾರ್ಯಕರ್ತ ಉಪ್ಪಳ ಸೋಂಕಾಲ್ ನಿವಾಸಿ ಅಬೂಬಕರ್ ಸಿದ್ದೀಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಬಿಜೆಪಿ ಕಾರ್ಯಕರ್ತ ಅಶ್ವಥ್ ಮತ್ತು ಕಾರ್ತಿಕ್ ಎನ್ನಲಾಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಒಂದು ಬೈಕ್ ಮತ್ತು ಸ್ವಲ್ಪ ದೂರದಲ್ಲಿನ ಪೊದೆಯಲ್ಲಿ ಎಸೆಯಲಾಗಿದ್ದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಸೇರಿ ಮೂವರ ವಿರುದ್ಧ ಪ್ರಕರಣ
ಅಬೂಬಕರ್ ಸಿದ್ಧೀಕ್ ಅವರ ಕೊಲೆಗೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳು ಮಂಗಳೂರಿನಲ್ಲಿರುವ ಬಗ್ಗೆ ಪೊಲೀಸರಿಗೆ ಅನುಮಾನವಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಅಶ್ವಥ್ ಸೇರಿದಂತೆ ಮೂವರ ವಿರುದ್ಧ ಕಾಸರಗೋಡು ಡಿಬೈಎಸ್ಪಿ ಎಂ.ವಿ,ಸುಕುಮಾರನ್ ಅವರ ನೇತೃತ್ವದ ತನಿಖಾ ತಂಡ ಪ್ರಕರಣ ದಾಖಲಿಸಿದೆ.

ದೋಹಾ ಕತಾರ್ ಉದ್ಯೋಗಿಯಾಗಿದ್ದ ಸಿಪಿಐ(ಎಂ) ಕಾರ್ಯಕರ್ತ ಸಿದ್ದಿಕ್ ಅವರು ಸ್ಥಳೀಯ ಮದ್ಯ ಮಾರಾಟ ದಂಧೆ ವಿರುದ್ಧ ದನಿ ಎತ್ತಿದ್ದು ಅವರ ಕೊಲೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಪ್ರಕರಣದ ತನಿಖೆಗೆ ಡಿವೈಎಸ್ಪಿ ನೇತೃತ್ವದಲ್ಲಿ ಇಬ್ಬರು ಪೊಲೀಸ್ ವೃತ್ತನಿರೀಕ್ಷಕರನ್ನೊಳಗೊಂಡ ಹದಿನೈದು ಮಂದಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.

ಸಿಪಿಐ(ಎಂ) ಕಾರ್ಯಕರ್ತ ಸಿದ್ದೀಕ್ ಅವರ ಬರ್ಬರ ಹಯೆ ಹಿನ್ನೆಲೆಯಲ್ಲಿ ಸಿಪಿಐ(ಎಂ) ಮಂಜೇಶ್ವರ ತಾಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಎರಡು ಗಂಟೆಯಿಂದ ಹರತಾಳಕ್ಕೆ ಕರೆ ನೀಡಿದೆ. ತಾಲೂಕಿನಾದ್ಯಂತ ಅಘೋಷಿತ ಬಂದ್ ಸ್ಥಿತಿ ನಿರ್ಮಾಣವಾಗಿದ್ದು, ಅಂಗಡಿಗಳು ಮುಚ್ಚಿವೆ. ಹಲವೆಡೆ ರಸ್ತೆಗೆ ಕಲ್ಲುಗಳನ್ನು ಅಡ್ಡವಿಟ್ಟು ರಸ್ತೆ ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಬಸ್ ಸಂಚಾರವೂ ಸ್ಥಗಿತಗೊಂಡಿದೆ.
ಕಾಸರಗೋಡು ಡಿವೈಎಸ್ಪಿ ಎಂ.ವಿ.ಸುಕುಮಾರನ್, ಕುಂಬಳೆ ಸಿಐ ಪ್ರೇಂ ಸದನ್ ನೇತೃತ್ವದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ದೋಹಾ ಕತಾರ್ ನಿಂದ ರಜೆಯಲ್ಲಿ ಬಂದಿದ್ದ ಸಿದ್ದೀಕ್
ಉಪ್ಪಳದ ಮಂಗಲ್ಪಾಡಿ ಎಂಬಲ್ಲಿ ಸಿಪಿಐ(ಎಂ) ಕಾರ್ಯಕರ್ತನನ್ನು ಮಾರಕಾಯುಧಗಳಿಂದ ಕೊಲೆಗೈದ ಕಳವಳಕಾರಿ ಘಟನೆ ರಾತ್ರಿ ವರದಿಯಾಗಿತ್ತು. ಸೋಂಕಾಲು ನಿವಾಸಿ ಅಝೀಝ್ ಅವರ ಪುತ್ರ ಅಬೂಬಕರ್ ಸಿದ್ಧಿಕ್(21) ಅವರನ್ನು ಕೊಲೆಗೈಯಲಾಗಿತ್ತು.

ಮಂಗಲ್ಪಾಡಿಯ ಸೋಂಕಾಲು ತಲುಪುತ್ತಿದ್ದಂತೆ ಬೈಕಿನಲ್ಲಿದ್ದ ಸಿದ್ಧಿಕ್ ಅವರನ್ನು ಎರಡು ಬೈಕ್ ಗಳಲ್ಲಿ ಸುತ್ತುವರಿದ ನಾಲ್ವರು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು.
ಸಿದ್ದಿಕ್ ಅವರನ್ನು ತಕ್ಷಣ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾದರೂ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ರಾತ್ರಿ ಹನ್ನೊಂದುವರೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತರಾದ ಸಿದ್ಧಿಕ್ ಅವರು ಕತಾರ್ ಉದ್ಯೋಗಿಯಾಗಿಯಾಗಿದ್ದು, ಕೆಲ ದಿನಗಳ ಹಿಂದಷ್ಟೇ ಊರಿಗೆ ಬಂದಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ