9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ. 6 ತಿಂಗಳ ಗರ್ಭಿಣಿ: ಆರೋಪಿ ಸೆರೆ

ಶಿಬಿ ಧರ್ಮಸ್ಥಳ/ಕರಾವಳಿ ಕರ್ನಾಟಕ ವರದಿ

ಬೆಳ್ತಂಗಡಿ
: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಅಮಾನವೀಯ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಡಿ ಗ್ರಾಮದಲ್ಲಿ ನಡೆದಿದೆ. ಆರೋಪಿಯನ್ನು ವೇಣೂರು ಪೋಲಿಸರು ಬಂಧಿಸಿದ್ದಾರೆ. 

ಸಂತ್ರಸ್ತ ಬಾಲಕಿ ಒಂಭತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮಧ್ಯದಲ್ಲೇ ಶಾಲೆಗೆ ಹೋಗುವುದನ್ನು ಬಿಟ್ಟಿದ್ದಾಳೆ. ಬಾಲಕಿಗೆ ಪರಿಚಿತನಾದ ನೆರೆಯ ಕಾಶಿಪಟ್ಣ ಗ್ರಾಮದ ಓಲ್ಪಾಡಿ ನಿವಾಸಿ ಸತೀಶ್ ಯಾನೆ ಶಶಿ(21) ಎಂಬಾತನೇ ಅತ್ಯಾಚಾರವೆಸಗಿದ ಆರೋಪಿಯಾಗಿದ್ದು ಈತನನ್ನು ವೇಣೂರು ಪೋಲಿಸರು ಬಂಧಿಸಿದ್ದಾರೆ.

ಬಾಲಕಿಯು ತನ್ನ ಕಾಶಿಪಟ್ಣದ ಅಜ್ಜಿ ಮನೆಗೆ ಹೋದ ಸಂದರ್ಭ ಪರಿಚಿತನಾದ ಆರೋಪಿ ಬಾಲಕಿ ಸ್ನೇಹಬೆಳೆಸಿದ್ದನು. ಬಳಿಕ  ದೂರವಾಣಿ ಮೂಲಕ ಸಂಪರ್ಕ ಮುಂದುವರಿಸುತ್ತಿದ್ದನು. ಕಳೆದ ಜನವರಿಯಲ್ಲಿ ಬಾಲಕಿಯ ಮನೆಯ  ಸನಿಹದ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿಸಿ ಗರ್ಭಿಣಿಯಾಗಿಸಿದ್ದಾನೆ. ಆದರೆ ಬಾಲಕಿಯು ಮಾತ್ರ ಇದನ್ನು ಯಾರಿಗೂ ಹೇಳಿರಲಿಲ್ಲ.

ಕೆಲದಿನಗಳ ಹಿಂದೆ  ತಾಯಿ ಲೀಲಾ (40) ತನ್ನ ಮಗಳನ್ನು ಶಿರ್ತಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದಾಗ ಆರು ತಿಂಗಳ ಗರ್ಭಿಣಿಯಾಗಿದ್ದಾಳೆಂದು ತಿಳಿದಿದೆ. ಈ ವಿಚಾರದಿಂದ ಆಘಾತಗೊಂಡ ಲೀಲಾ ಅವರು ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂದರ್ಭ ಲೀಲಾ ಅವರ ಪತಿ ತೀವ್ರ ಅನಾರೋಗ್ಯ ಪೀಡಿತರಾಗಿದ್ದು ಆಸ್ಪತ್ರೆಯಲ್ಲಿದ್ದರು. ಪ್ರಸ್ತುತ ಅವರು ಮನೆಯಲ್ಲಿದ್ದು ಅವರಿಗೆ ತನ್ನ ಮಗಳ ವಿಚಾರ ಇನ್ನೂ ತಿಳಿದಿಲ್ಲವಾಗಿದೆ.  
 
ಸಂಬಂಧಿಕರು ಹಾಗೂ ಪೋಲಿಸರು  ಶನಿವಾರ ಮನೆಯಲ್ಲಿ ಬಾಲಕಿಯನ್ನು ಪ್ರಶ್ನಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ವೇಣೂರು ಠಾಣೆಗೆ ದೂರು ನೀಡಿಲಾಗಿದ್ದು ಪೋಲಿಸರು ಫೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು ತನಿಖೆ ಮುಂದುವರಿಯುತ್ತಿದೆ.  ಈ ಮಧ್ಯೆ ಕೆಲ ದೃಶ್ಯಮಾಧ್ಯಮಗಳಲ್ಲಿ ತಂದೆಯೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಸುದ್ದಿ ಭಾನುವಾರ ಪ್ರಸಾರಗೊಂಡಿದ್ದು ಸ್ಥಳೀಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ