ಬಸ್ರೂರಿನಲ್ಲಿ ಕಥೊಲಿಕ್ ಸಂಘಟನೆಗಳಿಂದ ಬೃಹತ್ ರಕ್ತದಾನ ಶಿಬಿರ

ನವೀನ್ ಕೋತ್ ಆನಗಳ್ಳಿ/ಕರಾವಳಿಕರ್ನಾಟಕ ವರದಿ

ಕುಂದಾಪುರ:
ಕಥೊಲಿಕ್ ಸಭಾ ಬಸ್ರೂರು ಹಾಗೂ ಕಂಡ್ಲೂರು ಘಟಕ, ಭಾರತೀಯ ಕಥೊಲಿಕ್ ಯುವಸಂಚಲನ ಬಸ್ರೂರು , ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಹಾಗೂ ಬಸ್ರೂರು ಫಿಲಿಫ್ ಚರ್ಚ್ ನೇರಿ ದೇವಾಲಯದ ಆರೋಗ್ಯ ಆಯೋಗ ಇವರ ಜಂಟಿ ಆಶ್ರಯದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆದಿತ್ಯವಾರ ಆಯೋಜಿಸಲಾಗಿತ್ತು.  ಈ ಮೂಲಕ ‘ಗೆಳೆಯರ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಯಿತು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ  ಚರ್ಚ್ ಧರ್ಮಗುರುಗಳಾದ ವಂದನೀಯ ಚಾರ್ಲ್ಸ್ ನೊರೊನ್ಹಾ ಅವರು ರಕ್ತದಾನದ ಮಹತ್ವದ ಬಗ್ಗೆ ಮಾತಾಡಿದರು.  ರಕ್ತದಾನವು ದಾನಗಳಲ್ಲಿ ಮಹತ್ವದ್ದಾಗಿದ್ದು, ನಮಗೆ ಕೂಡ ಮುಂದೊಂದು ದಿನ ಅಗತ್ಯಬಿದ್ದಾಗ ಮತ್ತೊಬ್ಬರ ರಕ್ತ ಬಳಸಬೇಕಾಗಬಹುದು. ಆದ್ದರಿಂದ ರಕ್ತದಾನವನ್ನು ಎಲ್ಲರೂ ಮಾಡುವುದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕುಂದಾಪುರ ರೆಡ್ ಕ್ರಾಸ್ ಅಧ್ಯಕ್ಷ ಜಯಕರ ಶೆಟ್ಟಿ, ಬಸ್ರೂರು ಕಥೊಲಿಕ್ ಸಭಾ ಅಧ್ಯಕ್ಷೆ ಮೇಬಲ್ ಡಿ’ಸೋಜಾ,  ಐಸಿವೈಎಂ ಅಧ್ಯಕ್ಷ ಲಿನೆಟ್ ಕರ್ವಾಲೊ, ಕಂಡ್ಲೂರು ಕಥೊಲಿಕ್ ಸಭಾ ಅಧ್ಯಕ್ಷ ಲಾರೆನ್ಸ್ ಡಿ’ಸೋಜಾ, ಆರೋಗ್ಯ ಆಯೋಗ ಸಂಚಾಲಕಿ ವೆರೋನಿಕಾ ಬರೆಟ್ಟೊ, ರೆಡ್ ಕ್ರಾಸ್ ಸದಸ್ಯೆ ಕ್ಯಾಥೊಲಿಕ್ ಸಭಾ ಮಾರ್ಗದರ್ಶಕರಾದ ಸೋನಿ ಡಿ’ಕೋಸ್ಟಾ ಉಪಸ್ಥಿತರಿದ್ದರು.
ರಿಮಾ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ