ವಸತಿ ನಿಲಯದಲ್ಲಿ ಲೈಂಗಿಕ ಕಿರುಕುಳ: ನಿತಿಶ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಬಿಹಾರ ರಾಜ್ಯದ ಮುಜಾಫರ್ ಪುರ್ ಸೇರಿದಂತೆ ಹಲವು ವಸತಿನಿಲಯದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಖಂಡಿಸಿ ಜಂಥರ್ ಮಂಥರ್  ಬಳಿ ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ನೇತೃತ್ವದಲ್ಲಿ   ಪ್ರತಿಭಟನೆ ನಡೆಯಿತು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ,  ಮಾಜಿ ರಾಜ್ಯಸಭಾ ಸದಸ್ಯ ಶರದ್ ಯಾದವ್ , ಎಡಪಕ್ಷದ ನಾಯಕರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದಲ್ಲಿನ ಮಹಿಳೆಯರ ರಕ್ಷಣೆ ನಮ್ಮ ನಿಲುವು ಆಗಿದೆ. ಅವರ ರಕ್ಷಣೆಗಾಗಿಯೇ ಇಲ್ಲಿ ನಾವೆಲ್ಲೂ ಸೇರಿದ್ದೇವೆ. ಒಂದು ವೇಳೆ ನಿತಿಶ್ ಕುಮಾರ್ ಅವರಿಗೆ ನಾಚಿಕೆಯಾಗಿದ್ದರೆ ಕೂಡಲೇ  ಕ್ರಮ ಕೈಗೊಳ್ಳಬೇಕು  ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.

ಖೈದಿಗಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸೇರಿದಂತೆ  ಮುಜಾಫರ್ ಪುರ್ ವಿನ ವಸತಿ ನಿಲಯದಲ್ಲಿನ 11  ನೌಕರರನ್ನು  ಜುಲೈ 24 ರಂದು ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್  ಬಿಹಾರ ರಾಜ್ಯಸರ್ಕಾರಕ್ಕೆ ಸುಮೊಟೋ ನೋಟಿಸ್ ನೀಡಿತ್ತು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ