ಮಂಗಳೂರು: ಲಾರಿ-ಬೈಕ್ ಡಿಕ್ಕಿ, ಬೈಕ್ ಸವಾರ ಸಾವು

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಪಡೀಲ್ ನಿಂದ ನಂತೂರಿಗೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭ ಲಾರಿ ಗುದ್ದಿದಾಗ ಬೈಕ್ ಸವಾರ ಸಾವಪ್ಪಿದ ಖೇದಕರ ಘಟನೆ ವರದಿಯಾಗಿದೆ.

ಮೃತರನ್ನು ಪುತ್ತೂರಿನ ಡೆನಿಸ್ ಡಿ’ಸೋಜಾ ಅವರ ಮಗ ಪ್ರಜ್ವಲ್ ಡಿ’ಸೋಜಾ(24) ಎಂದು ಗುರುತಿಸಲಾಗಿದೆ.
ಅಪಘಾತದ ಬಳಿಕ ಲಾರಿ ಚಾಲಕನ ಪತ್ತೆ ಇಲ್ಲ.

ಹಿಂದಿನಿಂದ ಬೈಕಿಗೆ ಲಾರಿ ಗುದ್ದಿದ ಬಳಿಕವೂ ಲಾರಿ ನಿಲ್ಲಿಸದ ಕಾರಣ ಮೃತದೇಹ ಸಾಕಷ್ಟು ದೂರ ಎಳೆದುಕೊಂಡು ಹೋಗಿದ್ದು, ಪ್ರಜ್ವಲ್ ಅವರು ಸ್ಥಳದಲ್ಲೇ ಮೃತರಾಗಿದ್ದಾರೆ.

ಈ ಸಂದರ್ಭ ತಡವಾಗಿ ಆಗಮಿಸಿದ ಅಂಬುಲೆನ್ಸ್ ಸಿಬಂದಿ ಮೃತದೇಹವನ್ನು ಕೊಂಡೊಯ್ಯಲು ಒಪ್ಪಿಲ್ಲ ಎನ್ನಲಾಗಿದ್ದು, ಖಾಸಗಿ ಅಂಬುಲೆನ್ಸ್ ನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಮೃತದೇಹ ಕೊಂಡೊಯ್ಯಲಾಗಿದೆ.
ಪ್ರಜ್ವಲ್ ಅವರು ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಪ್ರತ್ಯೇಕ ಘಟನೆಯಲ್ಲಿ ಪಾವಂಜೆಯಿಂದ ಎನ್.ಐ.ಟಿ.ಕೆ ಕಡೆ ಸ್ಕೂಟರಿನಲ್ಲಿ ಸಾಗುತ್ತಿದ್ದ ರವೀಂದ್ರ ಪೂಜಾರಿ(44) ಎಂಬವರು ಲಾರಿ ಗುದ್ದಿ ಸಾವಪ್ಪಿದ್ದಾರೆ. ಸ್ಥಳದಲ್ಲೇ ರವೀಂದ್ರ ಅವರು ಸಾವಪ್ಪಿದ್ದರು.

ಅಪಘಾತ ಬಳಿಕ ವಾಹನ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿದ್ದಾನೆ.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ